ಸಿನಿಮಾಸೆಲೆಬ್ರಿಟಿ

ಉಲ್ಟಾ ಹೊಡೆದ ಉಮಾಪತಿ ಗೌಡ

ನಿರ್ಮಾಪಕ ಉಮಾಪತಿ ಇದೀಗ ದರ್ಶನ್ ಸ್ನೇಹಿತರಿಗೇ ಉಲ್ಟಾ ಹೊಡೆದು ಮಾತನಾಡಿದ್ದಾರೆ. ನನಗೆ ಖುದ್ದು ದರ್ಶನ್ ಅವರ ಸ್ನೇಹಿತರ ಕಡೆಯಿಂದಲೇ ಬೆದರಿಕೆ ಇದೆ. ಆ ವಿಷಯಕ್ಕೇ ನಾನು ಸದ್ಯ ಏನೂ ಮಾತನಾಡುವ ಸ್ಟೇಜ್ ನಲ್ಲಿ ಇಲ್ಲ ಎಂದಿದ್ದಾರೆ ರಾಬರ್ಟ್ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ.

ವಾಟ್ಸಾಪ್ ಡೀಟೇಲ್ಸ್ ನಾನೇ ಕಳಿಸಿದ್ದು!

ಇವತ್ತು ದರ್ಶನ್ ಅವರು ಸುದ್ದಿಗೋಷ್ಠಿ ಕರೆದು, ಉಮಾಪತಿ ಹಾಗೂ ನಕಲಿ ಬ್ಯಾಂಕ್ ಮ್ಯಾನೇಜರ್ ಅರುಣಾ ಕುಮಾರಿ ನಡುವಿನ ವಾಟ್ಸಾಪ್ ಸಂಭಾಷಣೆಯನ್ನು ಮಾಧ್ಯಮಕ್ಕೆ ನೀಡಿದ್ದಾರೆ. ಅದನ್ನು ತಾವೇ ಕಳಿಸಿಕೊಟ್ಟಿದ್ದೇನೆ. ನನ್ನ ಮತ್ತು ದರ್ಶನ್ ನಡುವೆ ತಂದಿಡುವ ಕಾರಣಕ್ಕೆ ಇವೆಲ್ಲವೂ ಆಗುತ್ತಿದೆ. ಜೊತೆಗೆ ಎಲ್ಲಿಯೂ ದರ್ಶನ್ ಅವರು ನಾನು ತಪ್ಪು ಮಾಡಿದ್ದೀನಿ ಅಂತ ಹೇಳಲಿಲ್ಲ. ಕಾನೂನು ವ್ಯವಸ್ಥೆ ಅಂತ ಒಂದು ಇದೆ. ಅದನ್ನ ನಾನು ನಂಬಿದ್ದೀನಿ. ಕಾಲವೇ ಉತ್ತರ ಕೊಡುತ್ತದೆ ಎಂದಿದ್ದಾರೆ ಉಮಾಪತಿ ಗೌಡ.

Spread the love

Related Articles

Leave a Reply

Your email address will not be published. Required fields are marked *

Back to top button