ಮನರಂಜನೆಸಿನಿಮಾಸೆಲೆಬ್ರಿಟಿ

‘ಅಣ್ಣತೆ’ ಚಿತ್ರದ ಫಸ್ಟ್ ಲುಕ್ ರಿಲೀಸ್ ಸಂದರ್ಭದಲ್ಲಿ ಕ್ರೌರ್ಯಮೆರೆದ ರಜನೀಕಾಂತ್ ಅಭಿಮಾನಿಗಳು

ರಜನೀಕಾಂತ್ ಅವರ ಬಹನಿರೀಕ್ಷೆಯ ‘ಅಣ್ಣತೆ’ ಚಿತ್ರದ ಫಸ್ಟ್ ಲುಕ್ ಸೆಪ್ಟೆಂಬರ್ 10 ರಂದು ಗಣೇಶ ಚತುರ್ಥಿಯ ದಿನದಂದು ಬಿಡುಗಡೆಯಾಯಿತು. ಈ ಪೋಸ್ಟರ್ ಸಾಕಷ್ಟು ಗಮನ ಸೆಳೆಯಿತು. ಆದರೆ ತಿರುಚಿ ಸೇರಿದಂತೆ ಕೆಲವು ಪ್ರದೇಶಗಳಲ್ಲಿನ ಕೆಲವು ನಟನ ಅಭಿಮಾನಿಗಳು ಸಂಕಷ್ಟಕ್ಕೆ ಸಿಲುಕಿದ್ದಾರಂತೆ.

ಯಾಕೆಂದರೆ ರಜನೀಕಾಂತ್ ಅವರ ‘ಅಣ್ಣತೆ’ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ವೀಕ್ಷಣೆಯ ವೇಳೆ ಮೇಕೆಯನ್ನು ಹತ್ಯೆ ಮಾಡಿ ರಕ್ತವನ್ನು ಸುರಿಸಿದ್ದರು. ಅಭಿಮಾನಿಗಳು ಕ್ರೌರ್ಯಮೆರೆದ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದನ್ನು ನೋಡಿ ಅನೇಕರು ಬೆಚ್ಚಿ ಬದ್ದಿದ್ದಾರೆ. ಈ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೆಟಾ , ಪ್ರಾಣಿ ಕಲ್ಯಾಣ ಸಂಸ್ಥೆ ಇದನ್ನು ಖಂಡಿಸಿದೆ. ಪ್ರಾಣಿ ಹತ್ಯೆಯನ್ನು ಟೀಕಿಸಿದ ಹಲವರು ಮೇಕೆ ಹತ್ಯೆ ಮಾಡಿದ ರಜನೀಕಾಂತ್ ಅಭಿಮಾನಿಗಳಿಗೆ ತಕ್ಕ ಶಿಕ್ಷೆ ನೀಡಬೇಕೆಂದು ತಿಳಿಸಿದ್ದಾರೆ. ಈ ಹಿಂದೆ ಕೂಡ ರಜನೀಕಾಂತ್ ಅವರ 2.0 ಚಿತ್ರ ಬಿಡುಗಡೆಯ ಸಂದರ್ಭದಲ್ಲಿ ಕೂಡ ಅಭಿಮಾನಿಗಳು ಇಂತಹದೇ ದುಷ್ಕೃತ್ಯ ಎಸಗಿದ್ದರು ಎನ್ನಲಾಗಿದೆ

Spread the love

Related Articles

Leave a Reply

Your email address will not be published. Required fields are marked *

Back to top button