ಮನರಂಜನೆಸಿನಿಮಾಸೆಲೆಬ್ರಿಟಿ

ಮಾಲ್ಡೀವ್ಸ್​ನಲ್ಲಿ ತಾಯಿ ಹುಟ್ಟುಹಬ್ಬ ಆಚರಿಸಿದ ಪೂಜಾ ಹೆಗ್ಡೆ

ಟಾಲಿವುಡ್ ಬ್ಯೂಟಿ ಪೂಜಾ ಹೆಗ್ಡೆ ಸಾಕಷ್ಟು ವರ್ಷಗಳ ಬಳಿಕ ಫ್ಯಾಮಿಲಿ ಜೊತೆ ಟ್ರಿಪ್ ಹೋಗಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ನಟಿ ಕೊನೆಗೂ 13 ವರ್ಷಗಳ ಬಳಿಕ ಕುಟುಂಬದವರ ಜೊತೆ ಹಾಲಿಡೇ ಎಂಜಾಯ್ ಮಾಡ್ತಿರೋದಾಗಿ ಹೇಳಿದ್ದಾರೆ.

ಬಹುಭಾಷೆಯಲ್ಲಿ ಮಿಂಚುತ್ತಿರುವ ಪೂಜಾ ಹೆಗ್ಡೆ ಶೂಟಿಂಗ್ ಮಧ್ಯೆಯೂ ಬಿಡುವು ಮಾಡಿಕೊಂಡು ಫ್ಯಾಮಿಲಿ ಜೊತೆ ಸಮಯ ಕಳೆಯುತ್ತಿದ್ದಾರೆ. ತಂದೆ, ತಾಯಿ ಹಾಗೂ ಸಹೋದರನ ಜೊತೆ ಮಾಲ್ಡೀವ್ಸ್​ಗೆ ತೆರಳಿದ್ದಾರೆ.

ಪೂಜಾ ಹೆಗ್ಡೆ ತಾಯಿ 60ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಅಮ್ಮನ ಹುಟ್ಟುಹಬ್ಬವನ್ನ ಮಾಲ್ಡೀವ್ಸ್ ಸಮುದ್ರ ತೀರದಲ್ಲಿ ಆಚರಿಸಿದ್ದಾರೆ. ಈ ಬರ್ತಡೇ ಪಾರ್ಟಿಯಲ್ಲಿ ಪೂಜಾ ಕುಟುಂಬದವರು ಮಾತ್ರವೇ ಭಾಗಿಯಾಗಿದ್ದಾರೆ.

ಸುಂದರ ಸಂಜೆಯ ಸಮುದ್ರ ತೀರದಲ್ಲಿ ತಾಯಿಯ ಬರ್ತಡೇ ಆಚರಿಸಿರುವ ಪೂಜಾ ಹೆಗ್ಡೆ ಅವುಗಳ ಪೋಟೋವನ್ನ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಅಲ್ಲದೆ ಬರ್ತಡೇ ಪಾರ್ಟಿಯ ಸಂಪೂರ್ಣ ಉಸ್ತುವಾರಿಯನ್ನ ಸ್ವತಃ ಪೂಜಾರೇ ನೋಡಿಕೊಂಡಿದ್ದಾರೆ.

ಮಂಗಳೂರು ಮೂಲದ ಪೂಜಾ ಹೆಗ್ಡೆ ತಮಿಳಿನ ಮೂಗಮೋಡಿ ಚಿತ್ರದ ಮೂಲದ ಬಣ್ಣದ ಬದುಕಿಗೆ ಕಾಲಿಟ್ಟ ನಟಿ. ಸದ್ಯ ಟಾಲಿವುಡ್​ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ನಟಿ ಈಕೆ.

ಪೂಜಾ ಹೆಗ್ಡೆ ನಟನೆಯ ರಾಧೆ ಶ್ಯಾಮ ಸಿನಿಮಾ ಬಿಡುಗಡೆಗೆ ಸಿದ್ದವಾಗಿದ್ದು ಇತ್ತೀಚೆಗಷ್ಟೇ ಮಹೇಶ್ ಬಾಬು ನಟನೆಯ ಮುಂದಿನ ಸಿನಿಮಾ ಸೆಟ್ಟೇರಿದೆ. ಪೂಜಾ ಹೆಗ್ಡೆಗೆ ತೆಲುಗು, ತಮಿಳು ಹಾಗೂ ಹಿಂದಿ ಚಿತ್ರದಲ್ಲಿ ಸಾಕಷ್ಟು ಭೇಡಿಕೆ ಇದೆ.

Related Articles

Leave a Reply

Your email address will not be published. Required fields are marked *

Back to top button