ಮನರಂಜನೆಸಿನಿಮಾಸೆಲೆಬ್ರಿಟಿ

ಪಾನ್ ಮಸಾಲ್ ಜಾಹೀರಾತನ್ನು ತೊರೆಯುವಂತೆ ಅಮಿತಾಬ್ ಬಚ್ಚನ್ ಗೆ ಪತ್ರ ಬರೆದ ಎನ್ ಜಿಓ

ಬಾಲಿವುಡ್ ನ ಹಿರಿಯ ನಟ ಅಮಿತಾಬ್ ಬಚ್ಚನ್ ಅವರು ಕಳೆದ ಕೆಲವು ದಿನಗಳಿಂದ ಪಾನ್ ಮಸಾಲಾ ಜಾಹೀರಾತಿನ ಬಗ್ಗೆ ಸುದ್ದಿಯಾಗುತ್ತಿದ್ದಾರೆ. ಅಮಿತಾಬ್ ಬಚ್ಚನ್ ಪಾನ್ ಮಸಾಲಾ ಜಾಹೀರಾತನ್ನು ನೋಡಿ ಅಭಿಮಾನಿಗಳು ಕೋಪಗೊಂಡಿದ್ದಾರೆ. ಇದೀಗ ರಾಷ್ಟ್ರೀಯ ತಂಬಾಕು ವಿರೋಧಿ ಸಂಘಟನೆಯೂ ಈ ವಿಷಯದಲ್ಲಿ ಮಧ್ಯಪ್ರವೇಶಿಸಿದೆ ಎನ್ನಲಾಗಿದೆ.

ಅಮಿತಾಬ್ ಬಚ್ಚನ್ ಅವರಿಗೆ ಎನ್ ಜಿಒ ಅಧಿಕೃತ ಪತ್ರವನ್ನು ಬರೆದು ಈ ಜಾಹೀರಾತಿನ ಪ್ರಚಾರವನ್ನು ಶೀಘ್ರದಲ್ಲಿಯೇ ಕೈಬಿಡುವಂತೆ ತಿಳಿಸಿದೆ. ಪಾನ್ ಮಸಾಲ, ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕಾರಕ ಎಂಬುದು ಹಲವು ಸಂಶೋಧನೆಯಿಂದ ಸಾಬೀತಾಗಿದೆ. ಹಾಗಾಗಿ ತಂಬಾಕು ನಿರ್ಮೂಲನ ರಾಷ್ಟ್ರೀಯ ಸಂಸ್ಥೆ ಅಧ್ಯಕ್ಷರು ಬಿಗ್ ಬಿ ಗೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ.

ಹಾಗೇ ಅಮಿತಾಬ್ ಅವರು ಪಲ್ಸ್ ಪೊಲೀಯೋ ಅಭಿಯಾನದ ಬ್ರಾಂಡ್ ಅಂಬಾಸಿಡರ್ ಆಗಿರುವುದರಿಂದ ಬೇಗನೆ ಪಾನ್ ಮಸಾಲಾ ಜಾಹೀರಾತಿನ ಪ್ರಚಾರವನ್ನು ತೊರೆಯುವಂತೆ ತಿಳಿಸಲಾಗಿದೆ. ಅಲ್ಲದೇ ಬಾಲಿವುಡ್ ನ ಹಲವು ನಟರು ಇಂತಹ ಜಾಹೀರಾತಿನಲ್ಲಿ ಕಾಣಿಸಿಕೊಂಡಿರುವುದರಿಂದ ವಿದ್ಯಾರ್ಥಿಗಳಲ್ಲಿ ತಂಬಾಕು ಸೇವನೆ ಹೆಚ್ಚುತ್ತಿದೆ ಎಂದು ಕಿಡಿಕಾರಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button