ಸಿನಿಮಾಸೆಲೆಬ್ರಿಟಿ

ಸಂಚಾರಿ ವಿಜಯ್ ಕನಸು ನನಸಾಯಿತು: ನಟಿ ನೀತು!

ಪೂರ್ಣ ವಿ-ರಾಮ

ಕೊನೆಗೂ ಸಂಚಾರಿ ವಿಜಯ್ ಕನಸು ಈಡೇರಿದೆ. ನಾಗರಹೊಳೆ ಸೈಡಿನ ಹಳ್ಳಿಗಾಡಿನ ಮನೆಗಳಿಗೆ ಟಾರ್ಪಲ್ ಹಾಕಿಸಬೇಕು ಎಂಬ ಆಸೆಯನ್ನ ಅವರೂ ಸೇರಿ ಶುರು ಮಾಡಿರುವ ಉಸಿರು ತಂಡ ಈಡೇರಿಸಿದೆ. ಸಾಹಿತಿ ಕವಿರಾಜ್ ಹಾಗೂ ನಟಿ ನೀತು ಸೇರಿದಂತೇ ಒಂದಷ್ಟು ವಾಲೆಂಟಿಯರ್ ಸದಸ್ಯರು ಸೇರಿ ಶುರುಮಾಡಿರುವ ಈ ಉಸಿರು ತಂಡ ಕೋವಿಡ್ ಕಷ್ಟದಲ್ಲಿರುವವರಿಗೆ ಬೆನ್ನೆಲುಬಾಗಿ ನಿಂತಿತ್ತು. ಆ ಸಮಯದಲ್ಲಿ ಸಂಚಾರಿ ವಿಜಯ್ ಕೂಡ ಓಡಾಡಿ ಸಹಾಯ ಮಾಡಿದ್ದರು. ರಾತ್ರೋರಾತ್ರಿ ಕಿಟ್ ವಿತರಿಸುವ ಮೂಲಕ ಮಾನವೀಯತೆ, ಸಾರ್ಥಕತೆ ಮೆರೆದಿದ್ದರು!
ಈ ಕುರಿತು ನಮ್ಮ ಜೊತೆ ನಾಗರಹೊಳೆ ಹಳ್ಳಿಗಾಡಿಗೆ ಹೋಗಿಬಂದ ನಟಿ ನೀತು ಅವರೇ ಮಾತನಾಡಿದ್ದಾರೆ. ಅಲ್ಲಿನ ಜನರ ಕಣ್ಣಲ್ಲಿ ಕಂಡ ಸಂಚಾರಿ ವಿಜಯ್ ನಗುವನ್ನ ನೆನೆದು ಭಾವುಕರಾಗಿದ್ದಾರೆ!

ಸಂಚಾರಿ ವಿಜಯ್ ಅವರ ಕೊನೇ ಆಸೆ!
ಈ ಬಗ್ಗೆ ವಿವರಣೆ ನೀಡುವ ನೀತು ಅವರು, “ಸಂಚಾರಿ ವಿಜಯ್ ಬಡವರಿಗೆ ಸಹಾಯ ಮಾಡಬೇಕು. ಅದರಲ್ಲೂ ಮನೆ ಇಲ್ಲದವರಿಗೆ ಮನೆ ಕಟ್ಟಿಸಿಕೊಡಬೇಕು ಎಂಬ ಮಹದಾಸೆ ಮೊದಲಿನಿಂದ ಇತ್ತು. ಮನೆ ಕಟ್ಟಿಸಿಕೊಡಲು ಕಷ್ಟವಾದರೂ ಕಡೇ ಪಕ್ಷ ಆ ಬಡ ಜನಗಳ ಗುಡಿಸಲಿಗೆ ಟಾರ್ಪಲ್ ಹಾಕಿಸಬೇಕು ಎನ್ನುವುದು ಅವರ ಕನಸಾಗಿತ್ತು. ಆ ಬಗ್ಗೆ ಅವರು ಆಕ್ಸಿಡೆಂಟ್ ಆಗುವ ಎರಡು ದಿನ ಮುನ್ನ ನಮ್ಮೆಲ್ಲರ ಜೊತೆ ಹಂಚಿಕೊAಡಿದ್ದರು. ಅದೇ ಕಾರಣಕ್ಕೆ ನಮ್ಮ ಉಸಿರು ತಂಡ ನಾಗರಹೊಳೆ ಸಮೀಪದ ಹಳ್ಳಿಗೆ ತೆರಳಿ ಟೋಟಲ್ ಅರವತ್ತೆöÊದು ಮನೆಗಳಿಗೆ ಟಾರ್ಪಲ್ ಅನ್ನು ಹೊದಿಸುವ ಕೆಲಸ ಮಾಡಿದೆವು” ಎನ್ನುತ್ತಾರೆ ನೀತು!

ಟೋಟಲ್ 65 ಮನೆಗಳು!
“ನಾಗರಹೊಳೆ ಸಮೀಪದ ಕೆಲ ತೀರಾ ಇಂಟೀರಿಯರ್ ಹಳ್ಳಿಗಳಿಗೆ ನಾನೂ ಸಹ ಹೋಗಿದ್ದೆ. ಅಲ್ಲೇ ಇದ್ದು ಬಡ ಕುಟುಂಬಗಳ ಮನೆಗೆ ಟಾರ್ಪಲ್ ವ್ಯವಸ್ಥೆ ಮಾಡಿದೆವು. ಅಲ್ಲಿನ ಜನರ ಬದುಕು ತುಂಬಾ ಕಷ್ಟದಲ್ಲಿದೆ. ಸೋರುವ ಮನೆಗಳ ಮಧ್ಯೆಯೇ ಅವರು ಬದುಕು ಸಾಗಿಸುತ್ತಿದ್ದಾರೆ. ಟೋಟಲ್ ಅರವತ್ತೈದು ಮನೆಗಳಿಗೆ ನಾವು ಟಾರ್ಪಲ್ ಹೊದಿಸುವ ಹೊಣೆ ಹೊತ್ತಿದ್ದೇವೆ. ನಿನ್ನೆವರೆಗೂ ಮೂವತ್ತೈದು ಮನೆಗಳು ಕಂಪ್ಲೀಟ್ ಆಗಿವೆ. ನಾನು ಇವತ್ತು ನಾಗರಹೊಳೆಯಿಂದ ವಾಪಸ್ ಬಂದೆ. ವಿಜಯ್ ನಿಸ್ವಾರ್ಥ ಕನಸು ಪೂರ್ತಿಗೊಳಿಸಲು ನಮ್ಮ ಉಸಿರು ತಂಡದ ಸಕಲ ಸದಸ್ಯರು ಅದಕ್ಕೆ ಕೈ ಜೋಡಿಸಿದ್ದೇವೆ. ಸಂಚಾರಿ ವಿಜಯ್ ಹೆಸರಲ್ಲಿ ಹೀಗೊಂದು ಸಾರ್ಥಕ ಸೇವೆ ಮಾಡುವಾಗ ನಮ್ಮ ಕಣ್ಣು ತುಂಬಿ ಬಂತು. ಬಡ ಜನಗಳ ಸೂರಿನ ಮೇಲೆ ಟಾರ್ಪಲ್ ಹೊದಿಕೆ ಮಾಡುವಾಗ ಸಂಚಾರಿ ವಿಜಯ್ ಹೇಳಿದ ಮಾತುಗಳು ನೆನಪಿಗೆ ಬಂತು” ಎಂದು ಭಾವುಕರಾಗುತ್ತಾರೆ ನಟಿ ನೀತು!

ವಿಜಯ್ ಅಲ್ಲೆಲ್ಲೋ ಓಡಾಡಿದಂತೆ ಫೀಲ್!
“ನಾಗರಹೊಳೆ ಸುತ್ತಮುತ್ತಲಿನ ಹಳ್ಳಿಗರ ಮನೆಗೆ ಟಾರ್ಪಲ್ ಹಾಕುವಾಗ ನಮಗೆ ಖಂಡಿತ ಅಲ್ಲೇ ಎಲ್ಲೋ ವಿಜಯ್ ಓಡಾಡಿದಂತೇ ಫೀಲ್ ಆಯಿತು. ಅದು ಅವನ ಆಸೆಯಾಗಿತ್ತು. ಅದು ಅವನ ಕನಸಾಗಿತ್ತು. ಅಂಥ ಒಬ್ಬ ಅಪರೂಪದ ಜೀವಿಯನ್ನ ನಾವು ಕಳೆದುಕೊಂಡೆವಲ್ಲಾ ಎನ್ನುವ ನೋವಿನ ನಡುವೆ ಅವರ ಕನಸನ್ನ ನನಸು ಮಾಡಲು ನಾವೆಲ್ಲಾ ಓಡಾಡುತ್ತಿದ್ದೇವೆ ಎಂಬ ಹೆಮ್ಮೆ, ಖುಷಿಯ ಜೊತೆ ಪ್ರೌಡ್ ಫೀಲ್ ನಮ್ಮ ಉಸಿರು ತಂಡದ ಪ್ರತಿಯೊಬ್ಬ ಸದಸ್ಯನಲ್ಲೂ ಇದೆ. ಆ ಸಾರ್ಥಕತೆ ನಮ್ಮಲ್ಲಿ ವಿಜಯ್ ಹೆಸರಲ್ಲಿ ಸರ್ವಿಸ್ ಮಾಡಲು ಹುಮ್ಮಸ್ಸು ನೀಡಿದೆ’ ಎನ್ನುತ್ತಾರೆ ಉಸಿರು ತಂಡದ ಸಕ್ರೀಯ ಕಾರ್ಯಕರ್ತೆ ನಟಿ ನೀತು!

Spread the love

Related Articles

Leave a Reply

Your email address will not be published. Required fields are marked *

Back to top button