ಮನರಂಜನೆಸಿನಿಮಾಸೆಲೆಬ್ರಿಟಿ

1 ಕೋಟಿ ರೂ ಕೇಳಿದ ಅಭಿಮಾನಿಗೆ ನಟ ಸೋನು ಸೂದ್ ಹೇಳಿದ್ದೇನು ಗೊತ್ತಾ?

ಬಾಲಿವುಡ್ ನಟ ಸೋನು ಸೂದ್ ಅವರು ಕೊರೊನಾ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಜನರ ಸೇವೆಗಾಗಿ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಹಾಗಾಗಿ ಅವರು ಎಲ್ಲರಿಗೂ ಚಿರಪರಿಚಿತರಾಗಿದ್ದಾರೆ. ಈ ಕಾರಣದಿಂದ ಪ್ರತಿದಿನ ಅವರ ಬಳಿ ಹಲವರು ಸಹಾಯ ಕೇಳುತ್ತಿದ್ದಾರೆ.

ಇತ್ತೀಚೆಗೆ ಅವರ ಅಭಿಮಾನಿಗಳು 2 ಟ್ವೀಟ್ ಮಾಡಿದ್ದು, ಅದರಲ್ಲಿ ಒಬ್ಬರು ಅವರ ಬಳಿ 1 ಕೋಟಿ ರೂ ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಸೋನು ಸೂದ್ ಅವರು, ಕೇವಲ 1 ಕೋಟಿ? ನೀವು ಹೆಚ್ಚಿನದನ್ನು ಕೇಳಬಹುದು ಎಂದು ತಮಾಷೆ ಮಾಡಿದ್ದಾರೆ.

ಹಾಗೇ ಮತ್ತೊಬ್ಬ ಅಭಿಮಾನಿ, ತನಗೆ ಅವರ ಮುಂದಿನ ಚಿತ್ರದಲ್ಲಿ ಒಂದು ಪಾತ್ರವನ್ನು ನೀಡುವಂತೆ ಕೇಳಿದ್ದಾರೆ. ಹಾಗೇ ನಟ ಸೋನು ಸೂದ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಆತ, ಯಾರಿಗಾದರೂ ಸಹಾಯ ಮಾಡುವುದಕ್ಕಿಂತ ದೊಡ್ಡ ಪಾತ್ರವಿಲ್ಲ, ನೀವು ಆ ಪಾತ್ರವನ್ನು ನಿರ್ವಹಿಸಿದ್ದೀರಿ, ಹಾಗಾಗಿ ನಿಮಗಿಂತ ದೊಡ್ಡ ನಾಯಕ ಇನ್ನಿಲ್ಲ ಎಂದು ಹೊಗಳಿದ್ದಾರೆ.

ಈ ಹಿಂದೆ ಕೂಡ ಸೋನು ಸೂದ್ ಅವರ ಬಳಿ ಅಭಿಮಾನಿಗಳು ತಮಾಷೆ ಮಾಡುತ್ತಿದ್ದು, ಅಭಿಮಾನಿಗಳು ತಮ್ಮ ಗೆಳತಿಗಾಗಿ ಐಫೋನ್, ಮಾಲ್ಡೀವ್ಸ್ ಗೆ ಪ್ರವಾಸ, ಕಾರು, ಉತ್ತಮ ಇಂಟರ್ ನೆಟ್ ವೇಗ ಮತ್ತು ಮದುವೆಗಳನ್ನು ಪ್ರಾಯೋಜಿಸುವಂತಹ ವಿಷಯಗಳ ಸಹಾಯಕ್ಕಾಗಿ ವಿನಂತಿಸಿದ್ದರು ಎನ್ನಲಾಗಿದೆ

Spread the love

Related Articles

Leave a Reply

Your email address will not be published. Required fields are marked *

Back to top button