ಮನರಂಜನೆಸಿನಿಮಾಸೆಲೆಬ್ರಿಟಿ
ತಮ್ಮ ಚಿತ್ರದ ಡೈಲಾಗ್ ಅನ್ನು ಮರುಸೃಷ್ಟಿಸಿದ ರಶ್ಮಿಕಾ ಮಂದಣ್ಣನಿಗೆ ನಟಿ ದೀಪಿಕಾ ಪಡುಕೋಣೆ ಹೇಳಿದ್ದೇನು ಗೊತ್ತಾ?

ಇದುವರೆಗೂ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಹೆಸರು ಗಳಿಸಿರುವ ನಟಿ ರಶ್ಮಿಕಾ ಮಂದಣ್ಣ ಬಾಲಿವುಡ್ ಚಿತ್ರಗಳಲ್ಲಿ ಯೂ ನಟಿಸುತ್ತಿದ್ದಾರೆ. ಇವರು ಪ್ರಸ್ತುತ ಬಾಲಿವುಡ್ ನಲ್ಲಿ ತಮ್ಮ ಚೊಚ್ಚಲ ಚಿತ್ರದ ಚಿತ್ರೀಕರಣದಲ್ಲಿದ್ದಾರೆ. ಹಾಗಾಗಿ ಅವರು ಬಾಲಿವುಡ್ ನಲ್ಲಿ ಸುದ್ದಿಯಾಗುತ್ತಿದ್ದಾರೆ.
ಇದೀಗ ಅವರ ವಿಡಿಯೋ ವೊಂದು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಇದರಲ್ಲಿ ಅವರು ದೀಪಿಕಾ ಪಡುಕೋಣೆಯ ಹಿಟ್ ಡೈಲಾಗ್ ಗಳನ್ನು ಮರುಸೃಷ್ಟಿಸಿದ್ದಾರೆ. ಇದಕ್ಕೆ ದೀಪಿಕಾ ಪಡುಕೋಣೆ ಕೂಡ ಪ್ರತಿಕ್ರಿಯೆ ನೀಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.
ದೀಪಿಕಾ ಪಡುಕೋಣೆಯವರ ಚೊಚ್ಚಲ ಚಿತ್ರ “ಓಂ ಶಾಂತಿ ಓಂ” ನ ‘ಏಕ್ ಚುಟ್ಕಿ ಸಿಂದೂರ್ ಕಿ ಕೀಮತ್’ ಎಂಬ ಐಕಾನಿಕ್ ಡೈಲಾಗ್ ಅನ್ನು ರಶ್ಮಿಕಾ ಮಂದಣ್ಣ ಹೇಳಿದ್ದಾರೆ. ದೀಪಿಕಾ ಪಡುಕೋಣೆ ಈ ಡೈಲಾಗ್ ಅನ್ನು ಉತ್ತಮವಾಗಿ ಹೇಳಿದ್ದರು. ಆದರೆ ನಟಿ ದೀಪಿಕಾ ಪಡುಕೋಣೆ, ರಶ್ಮಿಕಾ ಮಂದಣ್ಣ ಅವರ ಡೈಲಾಗ್ ಶೈಲಿಯನ್ನು ತುಂಬಾ ಇಷ್ಟಪಟ್ಟಿದ್ದಾರೆ ಎನ್ನಲಾಗಿದೆ.




