ಮನರಂಜನೆಸಿನಿಮಾಸೆಲೆಬ್ರಿಟಿ
ವಿಜಯ್ ಮಾಸ್ಟರ್ ಚಿತ್ರದ ರಿಮೇಕ್ ನ್ನು ತಿರಸ್ಕರಿಸಿದ ನಟ ಸಲ್ಮಾನ್ ಖಾನ್

ನಟ ವಿಜಯ್ ಹಾಗೂ ವಿಜಯ್ ಸೇತುಪತಿ ಅಭಿನಯದ ಆ್ಯಕ್ಷನ್ ಚಿತ್ರ ‘ಮಾಸ್ಟರ್’ ಬಿಡುಗಡೆಯಾಗಿ ಸೂಪರ್ ಹಿಟ್ ಎನಿಸಿಕೊಂಡಿತ್ತು. ಹಾಗಾಗಿ ಈ ಚಿತ್ರವನ್ನು ಶೀಘ್ರದಲ್ಲಿಯೇ ಬಾಲಿವುಡ್ ಗೆ ರಿಮೇಕ್ ಮಾಡಲಾಗುವುದು ಎನ್ನಲಾಗಿದೆ.
ಈ ಚಿತ್ರದಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ವಿಜಯ್ ನಟನೆಯ ಜೆಡಿ ಪಾತ್ರ ಮಾಡಲಿದ್ದಾರೆ ಎಂಬ ಸುದ್ದಿ ಕೇಳಿ ಬಂದಿತ್ತು. ಆದರೆ ಇತ್ತೀಚಿ ಸುದ್ದಿ ಪ್ರಕಾರ ಸಲ್ಮಾನ್ ಖಾನ್ ಮಾಸ್ಟರ್ ರಿಮೇಕ್ ನ್ನು ತಿರಸ್ಕರಿಸಿದ್ದಾರಂತೆ. ನಟ ಸಲ್ಮಾನ್ ಖಾನ್ ಈ ಹಿಂದೆ ದಬಾಂಗ್, ಜೈ ಹೋ ಮುಂತಾದ ಚಿತ್ರದ ರಿಮೇಕ್ ನಲ್ಲಿ ಕಾಣಿಸಿಕೊಂಡಿದ್ದರು. ಆದರೆ ಇತ್ತೀಚೆಗಷ್ಟೇ ಸಲ್ಮಾನ್ ಖಾನ್ ನಟಿಸಿದ ರಾಧೆ ರಿಮೇಕ್ ಚಿತ್ರ ಫ್ಲಾಪ್ ಆಗಿತ್ತು.
ಇದರಿಂದ ಬೇಸರಗೊಂಡ ಸಲ್ಮಾನ್ ಖಾನ್ ಅವರು ಮುಂಬರುವ ತಮ್ಮ ಚಿತ್ರಗಳು ಭಿನ್ನವಾಗಿರಬೇಕು ಎಂದು ತೀರ್ಮಾನಿಸಿ ಯಾವುದೇ ರಿಮೇಕ್ ನಲ್ಲಿ ನಟಿಸದಿರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಹಾಗಾಗಿ ಈ ಚಿತ್ರವನ್ನು ಕೈಬಿಟ್ಟರು ಎನ್ನಲಾಗಿದೆ.




