
ಕೊರೋನಾ ಅಟ್ಟಹಾಸ ಮತ್ತೆ ಶುರುವಾಗಿದೆ. ಸಾಕಷ್ಟು ಮಂದಿ ಕೋವಿಡ್ ಸೊಂಕಿಗೆ ತುತ್ತಾಗಿ ಚೇತರಿಸಿಕೊಳ್ತಿದ್ದಾರೆ. ಅದರಲ್ಲೂ ಈ ವಾರ ಸಾಕಷ್ಟು ಮಂದಿ ಸೆಲೆಬ್ರಿಟಿಗಳಿಗೆ ಕೋವಿಡ್ ಪಾಸಿಟಿವ್ ಆಗಿದ್ದು ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಬಾಲಿವುಡ್ ಜೋಡಿ ಜಾನ್ ಅಬ್ರಹಾಂ ಹಾಗೂ ಪ್ರಿಯಾ ದಂಪತಿಗಳಿಗೆ ಕೊರೋನಾ ಸೋಂಕು ತಗಲಿದ್ದು ಇದೀಗ ಚೇತರಿಸಿಕೊಳ್ತಿದ್ದಾರೆ. ಇದರ ಜೊತೆಗೆ ಬಾಲಿವುಡ್ ನಿರ್ಮಾಪಕಿ ಏಕ್ತಾ ಕಪೂರ್, ನಟಿ ಸ್ವರ ಭಾಸ್ಕರ್ ಹಾಗೂ ಕುಟುಂಬಸ್ಥರಿಗೂ ಕೋವಿಡ್ ಸೋಂಕು ದೃಡ ಪಟ್ಟಿದೆ.
ಇದರ ಜೊತೆಗೆ ಸಂಗೀತ ನಿರ್ದೇಶಕ ತಮನ್ ಎಸ್, ಕಟ್ಟಪ್ಪ ಖ್ಯಾತಿಯ ಸತ್ಯರಾಜ್, ನಟಿ ಕುಬ್ರಾ ಸೇಟ್, ಖ್ಯಾತ ಗಾಯಕ ವಿಶಾಲ್ ದದ್ಲಾನಿ, ಮಿಥಿಲಾ ಪಾಲ್ಕರ್ ಸೇರಿದಂತೆ ಇನ್ನೂ ಸಾಕಷ್ಟು ಮಂದಿ ಕೋವಿಡ್ ನಿಂದ ಬಳಲುತ್ತಿದ್ದಾರೆ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಂದ ಎಚ್ಚರವಾಗಿರುವಂತೆ ಸೋಷಿಯಲ್ ಮೀಡಿಯಾದ ಮೂಲಕ ಸೆಲೆಬ್ರಿಟಿಗಳು ಮನವಿ ಮಾಡ್ತಿದ್ದಾರೆ.




