
ಬಾಲಿವುಡ್ ಹಾಟ್ ಬೆಡಗಿ ಸೋನಾಲ್ ತೆಲುಗಿನ ಖ್ಯಾತ ನಟ ಕಿಂಗ್ ಎಂದು ಪ್ರಸಿದ್ದಿಯಾಗಿರುವ ನಾಗಾರ್ಜುನ ಅಕ್ಕಿನೇನಿ ಅಭಿನಯದ ದಿ ಘೋಸ್ಟ್ ಸಿನಿಮಾಕ್ಕೆ ಆಯ್ಕೆಯಾಗಿದ್ದಾರೆ.
ಈ ಹಿಂದೆ ನಾಯಕಿಯಾಗಿ ಕಾಜಲ್ ಅಗರ್ವಾಲ್ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಆದರೆ ಅವರು ಪ್ರೆಗ್ನೆನ್ಸಿ ಇದ್ದ ಕಾರಣ ಸಿನಿಮಾದಿಂದ ದೂರ ಸರಿದಿದ್ದಾರೆ. ನಂತರ ಜಾಕ್ವೆಲಿನ್ ಅವರನ್ನು ಆಯ್ಕೆ ಮಾಡಿಕೊಂಡಿತ್ತು. ಆದರೆ ವಂಚನೆ ಪ್ರಕರಣ ಸಿಲುಕಿಕೊಂಡಿದ್ದರಿಂದ ಅವರನ್ನು ಸಿನಿಮಾದಿಂದ ಕೈ ಬಿಡಲಾಗಿತ್ತು. ಇದೀಗ ಆ ಸ್ಥಾನಕ್ಕೆ ಬಾಲಿವುಡ್ ಹಾಟ್ ಬೆಡಗಿ ಆಯ್ಕೆ ಆಗಿದ್ದಾರೆ.
ಶಿರ್ಷಿಕೆಯಿಂದಲೇ ಸಿಕ್ಕಾಪಟ್ಟೆ ಈ ಸಿನಿಮಾ ಕುತೂಹಲ ಮೂಡಿಸಿದೆ. ಆಗಿದ್ದಾರೆ. ಬಾಲಿವುಡ್ ಸಿನಿಮಾ ಮೂಲಕ ತನ್ನ ಸಿನಿ ಕೆರಿಯರ್ ಆರಂಭಿಸಿದ ಸೋನಾಲ್ ತದನಂತರದಲ್ಲಿ ಕನ್ನಡ, ತಮಿಳು, ತೆಲುಗು ಚಿತ್ರದಲ್ಲಿ ಬಣ್ಣ ಹಚ್ಚಿ ತನ್ನನ್ನು ತಾನು ಗುರುತಿಸಿಕೊಂಡಿದ್ದಾರೆ.




