Kriti Sanon: ದೇಹ ಫಿಟ್ ಆಗಿರಲು ನಟಿ ಕೃತಿ ಸನೂನ್ ಈ ವ್ಯಾಯಾಮ ಮಾಡುತ್ತಾರಂತೆ

ನಟಿ ಕೃತಿ ಸನೂನ್ ಅವರು ಸೊಗಸಾದ ನೋಟ ಮತ್ತು ಫಿಟ್ ನೆಸ್ ನಲ್ಲಿ ಹೆಸರುವಾಸಿಯಾಗಿದ್ದಾರೆ. ಇವರು ತಮ್ಮ ಇನ್ ಸ್ಟಾಗ್ರಾಂನಲ್ಲಿ ಪ್ರತಿದಿನ ತನ್ನ ಫಿಟ್ ನೆಸ್ ವಿಡಿಯೋವನ್ನು ಅಪ್ ಲೋಡ್ ಮಾಡುತ್ತಿರುತ್ತಾರೆ. ಇತ್ತೀಚೆಗೆ ಕೃತಿ ಸನೋನ್ ಅವರ ವರ್ಕೌಟ್ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ನಟಿ ಕೃತಿ ಸನೂನ್ ಅವರು ತಮ್ಮ ಮುಂಬರುವ ಚಿತ್ರ ‘ಗಣಪತ್’ ಗಾಗಿ ತುಂಬಾ ಶ್ರಮಿಸುತ್ತಿದ್ದಾರೆ. ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಅವರು ಬೆವರು ಸುರಿಸುತ್ತಿರುವುದನ್ನು ಕಂಡುಬಂದಿದೆ. ನಟಿ ಕೃತಿ ಸನೂನ್ ಅವರು ಫಿಟ್ ಆಗಿರಲು ಚಕ್ರಾಸನ, ಸ್ಟ್ರೆಚಿಂಗ್, ಕೋರ್ ವ್ಯಾಯಾಮ, ಕಿಕ್ ಬಾಕ್ಸಿಂಗ್, ಜಿಮ್ ಬಾಲ್ ನಲ್ಲಿ ರೋಲಿಂಗ್ ನಂತಹ ವರ್ಕೌಟ್ ಗಳನ್ನು ಮಾಡುತ್ತಿದ್ದಾರೆ.
ಸ್ಟ್ರೆಚಿಂಗ್, ಸ್ನಾಯುಗಳಿಗೆ ವಿಶ್ರಾಂತಿ ನೀಡುತ್ತದೆ. ಇದು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಚಕ್ರಾಸನ ಬೆನ್ನು ಮೂಳೆಯನ್ನು ಬಲಗೊಳಿಸುತ್ತದೆ. ಅದರ ಜೊತೆಗೆ ಹೊಟ್ಟೆಯ ಬೊಜ್ಜು ಮತ್ತು ಕೊಬ್ಬನ್ನು ಕರಗಿಸುತ್ತದೆ. ಕೋರ್ ವ್ಯಾಯಾಮ, ದೇಹವನ್ನು ಫಿಟ್ ಆಗಿ ಆಕಾರದಲ್ಲಿಡಲು ಸಹಾಯ ಮಾಡುತ್ತದೆ. ಮತ್ತು ಸ್ನಾಯುಗಳನ್ನು ಬಲಪಡಿಸುತ್ತದೆ. ಕಿಕ್ ಬಾಕ್ಸಿಂಗ್ ದೇಹಕ್ಕೆ ಸಾಕಷ್ಟು ಶಕ್ತಿಯನ್ನು ನೀಡುತ್ತದೆ. ಸ್ನಾಯುಗಳನ್ನು ಬಲಗೊಳಿಸುತ್ತದೆ. ಬಾಲ್ ರೋಲಿಂಗ್ ದೇಹವನ್ನು ಸಮತೋಲನ ಗೊಳಿಸಲು ಸಹಾಯ ಮಾಡುತ್ತದೆ




