ಆರೋಗ್ಯಮನರಂಜನೆಲೈಫ್ ಸ್ಟೈಲ್ಸಿನಿಮಾಸೆಲೆಬ್ರಿಟಿ
Kareena Kapoor : ಗರ್ಭಾವಸ್ಥೆಯಲ್ಲಿ ಸೆಕ್ಸ್ ಡ್ರೈವ್ ಅನ್ನು ಕಳೆದುಕೊಂಡಿದ್ದಾರಂತೆ ಈ ಬಾಲಿವುಡ್ ನಟಿ

ಬಾಲಿವುಡ್ ನಟಿ ಕರೀನಾ ಕಪೂರ್ ಅವರು ಇತ್ತೀಚೆಗೆ ನಡೆದ ಕರಣ್ ಜೋಹರ್ ಜೊತೆ ಪುಸ್ಯಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಆ ವೇಳೆ ತನ್ನ ಗರ್ಭಾವಸ್ಥೆಯಲ್ಲಿ ಕಳೆದ ದಿನಗಳ ಬಗ್ಗೆ ಬಹಿರಂಗಪಡಿಸಿದ್ದಾರೆ.
ಆ ವೇಳೆ ಅವರು ತಮ್ಮ ಸೆಕ್ಸ್ ಡ್ರೈವ್ ಅನ್ನು ಕಳೇದುಕೊಂಡಿದ್ದು, ಅದಕ್ಕೆ ಪತಿ ಸೈಪ್ ಅಲಿ ಖಾನ್ ಅವರನ್ನು ಅರ್ಥಮಾಡಿಕೊಂಡು ಸಪೋಟ್ ಮಾಡಿದ್ದಾರೆ ಎಂಬುದಾಗಿ ತಿಳಿಸಿದ್ದಾರೆ.
ಗರ್ಭಾವಸ್ಥೆಯಲ್ಲಿ ಮಹಿಳೆಯರು ಸಾಕಷ್ಟು ಸಮಸ್ಯೆಗಳನ್ನು ಅನುಭವಿಸುತ್ತಾರೆ. ಆಗ ಪತಿ ಪತ್ನಿಯ ಮೇಲೆ ಒತ್ತಡ ಹೇರದೆ, ನಿಯಮಿತವಾಗಿ ಲೈಂಗಿಕ ಜೀವನದಲ್ಲಿ ಸಕ್ರಿಯವಾಗಿರಬೇಕು ಎಂದು ನಿರೀಕ್ಷಿಸದೆ ಅವರಿಗೆ ಬೆಂಬಲ ಸೂಚಿಸುವುದು ಬಹಳ ಮುಖ್ಯ ಎಂದು ಅವರು ತಿಳಿಸಿದ್ದಾರೆ.
ಗರ್ಭಾವಸ್ಥೆಯಲ್ಲಿ ಮಹಿಳೆಯರ ಭಾವನೆಗಳಿಗೆ ಎಲ್ಲಕ್ಕಿಂತ ಹೆಚ್ಚಿನ ಆದ್ಯತೆ ನೀಡಬೇಕು. ಆ ಸಮಯದಲ್ಲಿ ಮಹಿಳೆಯ ಮನಸ್ಥಿತಿ ಹೇಗಿರುತ್ತದೆ ಎಂದು ತಿಳಿದಿರಬೇಕು. ನಿಮ್ಮ ಪತಿಗೆ ಅದು ಅರ್ಥವಾಗದಿದ್ದರೆ ಅವನು ನಿಮ್ಮ ಮಗುವಿಗೆ ಒಳ್ಳೆಯ ತಂದೆಯಾಗಲು ಹೇಗೆ ಸಾಧ್ಯ ಎಂದು ಅವರು ಹೇಳಿದ್ದಾರೆ




