ಮನರಂಜನೆಸಿನಿಮಾಸೆಲೆಬ್ರಿಟಿ
Aishwarya Rai Bachchan: ಟ್ರೋಲ್ ಆದ ಐಶ್ವರ್ಯಾ ರೈ ಪ್ಯಾರಿಸ್ ಫ್ಯಾಶನ್ ವೀಕ್ ಫೋಟೋ

ಬಾಲಿವುಡ್ ನಟಿ ಐಶ್ವರ್ಯಾ ರೈ ಅವರು ಪತಿ ಮತ್ತು ಮಗಳ ಜೊತೆ ಪ್ಯಾರಿಸ್ ಫ್ಯಾಶನ್ ವೀಕ್ ಗಾಗಿ ಫ್ರಾನ್ಸ್ ನಲ್ಲಿದ್ದಾರೆ. ಭಾನುವಾರ ಅವರು ಕಾಸ್ಮೆಟಿಕ್ ಬ್ರಾಂಡ್ ಗಾಗಿ ರಾಂಪ್ ನಲ್ಲಿ ನಡೆದಿದ್ದಾರೆ. ಇದಕ್ಕೆ ಸಂಬಂಧಪಟ್ಟ ಅವರ ಫೋಟೊಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
ನಟಿ ಐಶ್ವರ್ಯಾ ರೈ ಬಿಳಿ ಉಡುಗೆಯನ್ನು ತೊಟ್ಟಿದ್ದಾರೆ. ರೆಡ್ ಕಾರ್ಪೆಟ್ ಅಥವಾ ರಾಂಪ್ ಮೇಲೆ ಐಶ್ವರ್ಯಾರನ್ನು ನೋಡಲು ಜನರು ಉತ್ಸುಕರಾಗಿರುತ್ತಾರೆ. ಬಹಳ ಸಮಯದ ನಂತರ ಅವರು ಫ್ಯಾಶನ್ ಶೋನಲ್ಲಿ ಕಾಣಿಸಿಕೊಂಡಿದ್ದು, ಅವರ ಅಭಿಮಾನಿಗಳು ಸಂತೋಷಗೊಂಡರು. ಆದರೆ ಇದಕ್ಕೆ ಕೆಲವರು ಟ್ರೋಲ್ ಮಾಡಿದ್ದಾರೆ.
ಈ ಫ್ಯಾಶನ್ ಶೋನಲ್ಲಿ ನಟಿಯ ಮೇಕಪ್ ಕೆಲವರಿಗೆ ಇಷ್ಟವಾಗಲಿಲ್ಲ. ಅದಕ್ಕಾಗಿ ಕೆಲವರು ಐಶ್ವರ್ಯಾ ಮೊದಲ ಬಾರಿಗೆ ಕುರೂಪಿಯಾಗಿ ಕಾಣಿಸುತ್ತಿದ್ದಾರೆ ಎಂದು ಟ್ರೋಲ್ ಮಾಡಿದ್ದಾರೆ. ಕೆಲವರು ಅವರ ತೂಕ ಹೆಚ್ಚಳದ ಬಗ್ಗೆ ಕಾಮೆಂಟ್ ಮಾಡಿದ್ದಾರೆ. ಕೆಲವರು ಅವರ ಉಡುಪಿನ ಬಗ್ಗೆ ಟ್ರೋಲ್ ಮಾಡಿದ್ದಾರೆ.




