ಚಿತ್ರದ ಸ್ಕ್ರಿಪ್ಟ್ ಇಷ್ಟವಾಗದ ಕಾರಣ ಅಕ್ಷಯ್ ಕುಮಾರ್ ಕೋಪಗೊಂಡು ಬರಹಗಾರನಿಗೆ ಮಾಡಿದ್ದೇನು ಗೊತ್ತಾ?

ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ಹಿಂದಿ ಚಿತ್ರರಂಗಕ್ಕೆ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರು ತಮ್ಮ ವಿಭಿನ್ನ ಶೈಲಿಯಲ್ಲಿ ಹೆಸರು ವಾಸಿಯಾಗಿದ್ದಾರೆ. ಅವರು ತಮ್ಮ ಚಿತ್ರದ ಸ್ಕ್ರಿಪ್ಟ್ ಆಯ್ಕೆ ಮಾಡಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಾರೆ.
ಹೀಗಿರುವಾಗ ಅವರು ಒಮ್ಮೆ ಬರಹಗಾರರೊಬ್ಬರು ತಮ್ಮ ಸ್ಕ್ರಿಪ್ಟ್ ನೊಂದಿಗೆ ಅಕ್ಷಯ್ ಕುಮಾರ್ ಅವರ ಬಳಿ ಬಂದಾಗ ಅವರು ತಮ್ಮ ಕಾರಿನಲ್ಲಿ ಬರಹಗಾರನನ್ನು ಕರೆದುಕೊಂಡು ಸ್ಕ್ರಿಪ್ಟ್ ಕೇಳುತ್ತಾ ಹೋಗಿದ್ದಾರೆ. ಆದರೆ ಅವರಿಗೆ ಸ್ಕ್ರಿಪ್ಟ್ ಇಷ್ಟವಾಗದ ಕಾರಣ ಅವರನ್ನು ದಾರಿ ಮಧ್ಯೆ ಪುಣೆ ಹೆದ್ದಾರಿಯಲ್ಲಿ ಬಿಟ್ಟು ಹೋಗಿದ್ದಾರೆ ಎಂಬ ಮಾತು ಕೇಳಿ ಬಂದಿದೆ.
ಈ ಬಗ್ಗೆ ‘ದಿ ಕಪಿಲ್ ಶರ್ಮಾ’ ಶೋ ನಲ್ಲಿ ಭಾಗವಹಿಸಿದ ಅಕ್ಷಯ್ ಅವರ ಬಳಿ ಕಪಿಲ್ ಅವರು ಪ್ರಶ್ನಿಸಿದಾಗ, ಇದಕ್ಕೆ ಉತ್ತರಿಸಿದ ನಟ ಅಕ್ಷಯ್ ಕುಮಾರ್ , ನಾನು ಅವನನ್ನು ಉದ್ದೇಶಪೂರ್ವಕವಾಗಿ ಬಾಂದ್ರಾದಿಂದ ಪುಣೆ ಹೆದ್ದಾರಿಯ ಬಳಿ ಕರೆದುಕೊಂಡು ಹೋಗಿ ಅಲ್ಲಿ ಇಳಿಸಿದೆ. ಜನರು ಒಳ್ಳೆಯ ಸ್ಕ್ರಿಪ್ಟ್ ನೊಂದಿಗೆ ನನ್ನ ಬಳಿಗೆ ಬರಬೇಕೆಂದು ನಾನು ಬಯಸುತ್ತೇನೆ ಎಂದು ತಿಳಿಸಿದ್ದಾರೆ.




