ಮನರಂಜನೆಸಿನಿಮಾಸೆಲೆಬ್ರಿಟಿ

ಬಿಗ್ ಬಾಸ್ ಖ್ಯಾತಿಯ ದಿವ್ಯಾ ಸುರೇಶ್​ಗೆ ಆಕ್ಸಿಡೆಂಟ್

ನಟಿ ದಿವ್ಯಾ ಸುರೇಶ್ ಬಿಗ್ ಬಾಸ್ ಸೀಸನ್​ 8ಗೆ ಎಂಟ್ರಿಕೊಟ್ಟ ಬಳಿಕ ಸಾಕಷ್ಟು ಖ್ಯಾತಿ ಘಳಿಸಿದ್ದಾರೆ. ಫಿನಾಲೆ ಪ್ರವೇಶಿಸಿದ ದಿವ್ಯಾ ಸುರೇಶ್ ಮಂಜು ಪಾವಗಡ ಜೊತೆಗಿನ ಸ್ನೇಹದಿಂದಲೇ ಸಾಕಷ್ಟು ಸುದ್ದಿಯಾಗಿದ್ರು. ಬಿಗ್ ಬಾಸ್ ಮನೆಯಿಂದ ಹೊರ ಬಂದ ಬಳಿಕ ದಿವ್ಯಾ ಸುರೇಶ್​ಗೆ ಹೆಚ್ಚು ಹೆಚ್ಚು ಸಿನಿಮಾಗಳ ಆಫರ್ ಬರ್ತಿದೆ. ಇದೀಗ ದಿವ್ಯಾ ಸುರೇಶ್​​ಗೆ ಅಪಘಾತವಾಗಿದ್ದು ಸಣ್ಣ ಪುಟ್ಟ ಗಾಯಗಳಿಂದ ಚೇತರಿಸಿಕೊಳ್ತಿದ್ದಾರೆ.

ಸೋಮವಾರ ಅಪಘಾತವಾಗಿದ್ದು ತಡವಾಗಿ ಪ್ರಕರಣ ಬೆಳಕಿಗೆ ಬಂದಿದೆ. ಬೆಂಗಳೂರಿನ ಹುಚ್ಚಳ್ಳಿ ರೋಡ್​ನಲ್ಲಿ ದ್ವಿಚಕ್ರ ವಾಹನದಲ್ಲಿ ತೆರಳುವಾಗ ನಾಯಿಗಳು ಅಡ್ಡಬಂದ ಪರಿಣಾಮ ಅಪಘಾತ ಸಂಭವಿಸಿದೆ. ಕೊರೊನಾ ವ್ಯಾಕ್ಸಿನ್ ತೆಗೆದುಕೊಂಡು ಮನೆಗೆ ತೆರಳುವಾಗ ಘಟನೆ ನಡೆದಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಯಲ್ಲಿ ರೆಸ್ಟ್ ಮಾಡುತ್ತಿದ್ದಾರೆ.

ಮುಖಕ್ಕೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ದಿವ್ಯಾ ಸುರೇಶ್ ಪಾರಾಗಿದ್ದಾರೆ. ಇನ್​ಸ್ಟಾಗ್ರಾಮ್ ಸ್ಟೇಟಸ್ ಮೂಲಕ ದಿವ್ಯಾ ಸುರೇಶ್ ಈ ಮಾಹಿತಿಯನ್ನ ಹಂಚಿಕೊಂಡಿದ್ದು ದಿವ್ಯಾ ಸುರೇಶ್ ಬೇಗ ಗುಣಮುಖರಾಗಲಿ ಎಂದು ಅಭಿಮಾನಿಗಳು ಆಶಿಸುತ್ತಿದ್ದಾರೆ.

ಹೊಸ ವರ್ಷದ ಸಂದರ್ಭದಲ್ಲಿ ನೈಟ್ ಕರ್ಪ್ಯೂ ಹೇರಲಾಗಿದ್ದು ಈ ವೇಳೆ ಎಂಜಿ ರೋಡ್​ನಲ್ಲಿ ಕುಡಿದು ದಿವ್ಯಾ ಸುರೇಶ್ ಹಾಗೂ ಅವರು ಸ್ನೇಹಿತರು ಓಡಾಡುತ್ತಿದ್ದರು. ಈ ವೇಳೆ ಪೊಲೀಸರು ಅವರನ್ನ ಮನೆಗೆ ಕಳುಹಿಸಲು ಮುಂದಾಗಿದ್ದು ದಿವ್ಯಾ ಹಾಗೂ ಸ್ನೇಹಿತರು ಹೈಡ್ರಾಮ ನಡೆಸಿದ್ದು ಕ್ಯಾಮಾರಗಳಲ್ಲಿ ಸೆರೆಯಾಗಿತ್ತು.

Spread the love

Related Articles

Leave a Reply

Your email address will not be published. Required fields are marked *

Back to top button