ಮನರಂಜನೆಸಿನಿಮಾ

ಶೀಘ್ರದಲ್ಲೇ ಹಸೆಮಣೆ ಏರಲಿರುವ ಚಂದನವನದ ಮತ್ತೊಂದು ಜೋಡಿ

ಇತ್ತೀಚೆಗೆ ಚಂದನವನದಲ್ಲಿ ಸಾಲು ಸಾಲು ಮದುವೆಗಳು ನಡೆಯುತ್ತಿವೆ. ಈಗಾಗಲೇ ಶುಭಾ ಪೂಂಜಾ ಮತ್ತು ಕೆಜಿಎಫ್ ಬೆಡಗಿ ಮೌನಿ ರಾಯ್ ಹೀಗೆ ಹಲವರು ನಟಿಯರು ಹಸೆಮಣೆ ಏರಿದ್ದಾರೆ. ಇನ್ನು ಇತ್ತೀಚೆಗೆ ನಟಿ ಅದಿತಿ ಪ್ರಭುದೇವ್ ಕೂಡ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇದೀಗ ನಿರ್ದೇಶಕ ಸಾಗರ್ ಪುರಾಣಿಕ್ ಸರದಿಯಾಗಿದೆ.

ಹೌದು ಸುನೀಲ್ ಪುರಾಣಿಕ್ ಅವರ ಮಗ ಸಾಗರ್ ಪುರಾಣಿಕ್, ನಟಿ ದೀಪಾ ಜಗದೀಶ್ ಜೊತೆ ಮದುವೆಯಾಗಲಿದ್ದಾರೆ. ಈ ಬಗ್ಗೆ ಅವರು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಇವರಿಬ್ಬರು ತುಂಬಾ ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಮಹಾಸತಿ ಧಾರಾವಾಹಿಯನ್ನು ಸುನೀಲ್ ಪುರಾಣಿಕ್ ನಿರ್ಮಾಣ ಮಾಡಿದ್ದರು. ಶೂಟಿಂಗ್ ಸೆಟ್‌ನಲ್ಲಿ ಸಾಗರ್ ಮತ್ತು ದೀಪಾ ಮೊದಲು ಭೇಟಿಯಾಗಿದ್ದರಂತೆ.

ಇನ್ನು ಸಾಗರ್ ಪುರಾಣಿಕ್ ಅವರಿಗೆ ಮೊದಲ ನಿರ್ದೇಶನದ ಸಿನಿಮಾ ಡೊಳ್ಳು ಗೆ ಈಗಾಗಲೇ ಕೆಲವು ಪ್ರಶಸ್ತಿಗಳು ಸಿಕ್ಕಿವೆ. ಕನ್ನಡ ಕಾವ್ಯಾಂಜಲಿ ಧಾರಾವಾಹಿ ಮೂಲಕ ದೀಪಾ ಜಗದೀಶ್ ಜನಪ್ರಿಯತೆ ಪಡೆದುಕೊಂಡಿದ್ದರು.ಸದ್ಯಕ್ಕೆ ದೀಪಾ ಜಗದೀಶ್ ತೆಲುಗು ಧಾರಾವಾಹಿಯಲ್ಲಿ ಬ್ಯುಸಿಯಾಗಿದ್ದಾರೆ. ಶೀಘ್ರದಲ್ಲೇ ಈ ಜೋಡಿ ಹಸೆಮಣೆ ಏರುವುದಕ್ಕೆ ನಿರ್ಧರಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button