ಪುಷ್ಪಗಿಂತಲೂ ಅದ್ದೂರಿ ಬಜೆಟ್ ಪ್ರಾಜೆಕ್ಟ್ ನಲ್ಲಿ ಅಲ್ಲು ಅರ್ಜುನ್, ಬನ್ಸಾಲಿ ಭೇಟಿಯ ಹಿಂದಿನ ಉದ್ದೇಶ ಇದೇನಾ?

ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಚಿತ್ರದಲ್ಲಿ ನಟಿಸಲು ಕಲಾವಿದರು ಕ್ಯೂನಲ್ಲಿ ನಿಂತಿರ್ತಾರೆ. ಬನ್ಸಾಲಿ ಚಿತ್ರಗಳು ಬಿಡುಗಡೆಗೂ ಮೊದಲೆ ಸಾಕಷ್ಟು ಸದ್ದು ಮಾಡಿ ಬಿಡುಗಡೆಯ ಬಳಿಕ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯೋದು ಗೊತ್ತೆ ಇದೆ. ಬಾಲಿವುಡ್ ಚಿತ್ರರಂಗದಲ್ಲಿ ಮೊದಲಿನಿಂದಲೂ ತನ್ನದೇ ಟ್ರೇಡ್ ಮಾರ್ಕ್ ಕ್ರಿಯೇಟ್ ಮಾಡಿರುವ ಬನ್ಸಾಲಿಯ ಮುಂದಿನ ಸಿನಿಮಾ ಯಾವುದು? ಯಾರ ಜೊತೆ ಸಿನಿಮಾ ಮಾಡ್ತಿದ್ದಾರೆ ಅನ್ನೋ ಕುತೂಹಲಕ್ಕೆ ಸದ್ಯದ ಮಟ್ಟಿಗೆ ತೆರೆ ಬಿದ್ದಿದೆ.
ಬನ್ಸಾಲಿ ಸಿನಿಮಾಗಳಲ್ಲಿ ಸ್ಟಾರ್ ಕ್ಯಾಸ್ಟ್ ಗೇನು ಕಡಿಮೆ ಇರಲ್ಲ. ಚಿತ್ರರಂಗದ ದಿಗ್ಗಜರುಗಳನ್ನೆಲ್ಲಾ ತನ್ನ ಸಿನಿಮಾದಲ್ಲಿ ಹಾಕಿಕೊಂಡು ಚಿತ್ರ ನಿರ್ದೇಶನ ಮಾಡೋದ್ರಲ್ಲಿ ಬನ್ಸಾಲಿ ಎತ್ತಿದ ಕೈ. ಸದ್ಯ ಬನ್ಸಾಲಿ ನಿರ್ದೇಶನದ ಆಲಿಯಾ ಭಟ್ ನಟನೆಯ ಗಂಗೂಬಾಯಿ ಕಾಠಿಯಾವಾಡಿ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡಿದೆ. ಬಾಲಿವುಡ್ ನಲ್ಲಿ ದೂಳೆಬ್ಬಿಸುತ್ತಿರುವ ಗಂಗೂಬಾಯಿ ಚಿತ್ರ 102.68 ಕೋಟಿ ಕಲೆಕ್ಷನ್ ಮಾಡಿದೆ. ಇದೀಗ ಬನ್ಸಾಲಿ ಮುಂದಿನ ಸಿನಿಮಾಗೆ ತಯಾರಿ ಮಾಡಿಕೊಳ್ತಿದ್ದಾರೆ.
ಬನ್ಸಾಲಿ ಮುಂದಿನ ಚಿತ್ರದಲ್ಲಿ ನಟ ಅಲ್ಲು ಅರ್ಜುನ್ ಕಾಣಿಸಿಕೊಳ್ಳಲಿದ್ದಾರೆ ಅನ್ನೋ ಸುದ್ದಿ ಹರಿದಾಡ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ಇತ್ತೀಚೆಗೆ ಅಲ್ಲು ಅರ್ಜುನ್ ಮುಂಬೈನಲ್ಲಿರುವ ಬನ್ಸಾಲಿ ಕಚೇರಿಗೆ ತೆರಳಿದ್ದು ಸಾಕಷ್ಟು ಕುತೂಹಲ ಕ್ರಿಯೇಟ್ ಮಾಡಿದ್ದಾರೆ.
ಬನ್ಸಾಲಿ ಕಚೇರಿಗೆ ಅಲ್ಲು ಅರ್ಜುನ್ ಭೇಟಿ ನೀಡುತ್ತಿದ್ದಂತೆಯೇ, ಬಾಲಿವುಡ್ ಅಂಗಳದಲ್ಲಿ ಗುಸು ಗುಸು ಶುರುವಾಗಿದೆ. ಅಲ್ಲು ಅರ್ಜುನ್ ಹಾಗೂ ಸಂಜಯ್ ಲೀಲಾ ಭನ್ಸಾಲಿ ಒಂದಾಗುತ್ತಿದ್ದಾರೆ. ಹೀಗಾಗಿ, ಹೊಸ ಪ್ರಾಜೆಕ್ಟ್ ಬಗ್ಗೆ ಮಾತುಕತೆ ನಡೆಸಲು ಸಂಜಯ್ ಲೀಲಾ ಬನ್ಸಾಲಿ ಆಫೀಸ್‌ಗೆ ಅಲ್ಲು ಅರ್ಜುನ್ ತೆರಳಿದ್ದು ಅಂತೆಲ್ಲಾ ಗುಸುಗುಸು ಕೇಳಿಬರುತ್ತಿದೆ. ಐಶ್ವರ್ಯ ರೈ, ದೀಪಿಕಾ ಪಡುಕೋಣೆ, ‘ಪ್ರಿಯಾಂಕಾ ಚೋಪ್ರಾ, ರಣ್‌ವೀರ್ ಸಿಂಗ್, ಅಜಯ್ ದೇವ್ಗನ್, ಸಲ್ಮಾನ್ ಖಾನ್ ರಂತಹ ದೊಡ್ಡ ದೊಡ್ಡ ಸ್ಟಾರ್‌ಗಳಿಗೆ ಆಕ್ಷನ್ ಕಟ್ ಹೇಳಿರುವ ಬನ್ಸಾಲಿ ಇದೀಗ ಅಲ್ಲು ಅರ್ಜುನ್ ಜೊತೆಗೆ ಕೈ ಜೋಡಿಸುತ್ತಾರಾ ಎಂದು ಅಭಿಮಾನಿಗಳು ಚರ್ಚೆ ಮಾಡುತ್ತಿದ್ದಾರೆ.
ಅಲ್ಲು ಅರ್ಜುನ್ ನಟನೆಯ ಪುಷ್ಪ ಸಿನಿಮಾ ಸಾಕಷ್ಟು ಸದ್ದು ಮಾಡ್ತಿದೆ. ಚಿತ್ರದ ಕೆಲೆಕ್ಷನ್ ಬಾಕ್ಸ್ ಆಪೀಸ್ ಕೊಳ್ಳೆ ಹೊಡೆದಿದ್ದು ಒಟಿಟಿಯಲ್ಲೂ ಕಮಾಲ್ ಮಾಡಿದೆ. ಈ ಮಧ್ಯೆ ಬನ್ಸಾಲಿ ಪುಷ್ಪ ಚಿತ್ರಕ್ಕಿಂತಲೂ ಅದ್ದೂರಿ ಬಜೆಟ್ ನ ಸಿನಿಮಾದಲ್ಲಿ ಅಲ್ಲು ಅರ್ಜುನ್ ಜೊತೆ ಕೈ ಜೋಡಿಸಲಿದ್ದಾರೆ ಅನ್ನೋ ಮಾತು ಕೇಳಿ ಬರ್ತಿದೆ.




