ಕೊನೆಗೂ ಈಡೇರಿತು ಸಂಯುಕ್ತ ಹೆಗ್ಡೆ ಬಾಲ್ಯದ ಕನಸು

ಕಿರಿಕ್ ಪಾರ್ಟಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ನಟಿ ಸಂಯುಕ್ತ ಹೆಗ್ಡೆ ಮೊದಲ ಚಿತ್ರದಲ್ಲೇ ಅಭಿಮಾನಿಗಳ ಮನಸ್ಸು ಗೆಲ್ಲುವಲ್ಲಿ ಸಕ್ಸಸ್ ಆಗಿದ್ರು. ಕಿರಿಕ್ ಪಾರ್ಟಿ ಚಿತ್ರದ ಬಳಿಕ ಪರಭಾಷೆಯಲ್ಲೂ ಸದ್ದು ಮಾಡ್ತಿರೋ ಸಂಯುಕ್ತ ಹೆಗ್ಡೆ ಸಖತ್ ಖುಷಿಯಲ್ಲಿದ್ದಾರೆ. ತಮ್ಮ ಖುಷಿಯನ್ನ ಸೋಷಿಯಲ್ ಮೀಡಿಯಾದ ಮೂಲಕ ಅಭಿಮಾನಿಗಳಲ್ಲಿ ಹಂಚಿಕೊಂಡಿದ್ದಾರೆ.
ಕಾಂಟ್ರವರ್ಸಿಗಳಿಂದಲೇ ಹೆಚ್ಚು ಸುದ್ದಿಯಲ್ಲಿರೋ ಸಂಯುಕ್ತ ಹೆಗ್ಡೆ ಬೆಸ್ಟ್ ಡ್ಯಾನ್ಸರ್ ಅನ್ನೋದರಲ್ಲಿ ಎರಡು ಮಾತಿಲ್ಲ. ತಮ್ಮ ಡ್ಯಾನ್ಸ್ನಿಂದಲೇ ಮೋಡಿ ಮಾಡೋ ಸಂಯುಕ್ತ ಹೆಗ್ಡೆ ಹೆಜ್ಜೆ ಹಾಕಿರೋ ಪ್ರಭುದೇವ್ ನಟನೆಯ ಥೀಲ್ ಸಿನಿಮಾ ರಿಲೀಸ್ ಆಗಿದ್ದು ತಕ್ಕಮಟ್ಟಿಗೆ ಪ್ರಶಂಸೆ ಪಡೆದುಕೊಂಡಿದೆ. ಚಿತ್ರ ರಿಲೀಸ್ ಆಗಿರೋ ಬೆನ್ನಲ್ಲೆ ಚಿತ್ರದ ಹಾಡು ಯುಟ್ಯೂಬ್ ನಲ್ಲಿ ರಿಲೀಸ್ ಆಗಿದ್ದು ಇದ್ರ ಬಗ್ಗೆ ನಟಿ ಸಂಯುಕ್ತ ಹೆಗ್ಡೆ ಬರೆದುಕೊಂಡಿದ್ದಾರೆ.
ಚಿಕ್ಕ ವಯಸ್ಸಿನಲ್ಲೇ ನನ್ನದೊಂದು ಕನಸಿತ್ತು. ಅದು ಏನೆಂದರೇ ನಟ ಪ್ರಭುದೇವ್ ಅವರ ಜೊತೆ ಡ್ಯಾನ್ಸ್ ಮಾಡಬೇಕು ಎಂಬುದು. ಅದು ಈಗ ಈಡೇರಿದೆ. ನಾನು ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟಾಗ ನನ್ನದೊಂದು ಕನಸಿತ್ತು. ಸಿನಿಮಾದಲ್ಲಿ ಪ್ರಭುದೇವ ಅವರೊಂದಿಗೆ ಮೊದಲು ನಾನು ಡ್ಯಾನ್ಸ್ ಮಾಡಬೇಕು ಎಂದು. ಈಗ ಅದು ಈಡೇರಿದೆ.
ಪ್ರಭುದೇವ್ ಅವರನ್ನ ನೋಡಿಯೇ ನನಗೆ ಡ್ಯಾನ್ಸ್ನಲ್ಲಿ ಹೆಚ್ಚು ಆಸಕ್ತಿ ಹುಟ್ಟಿದು. ಅವರು ತುಂಬ ನೈಜವಾಗಿ ಡ್ಯಾನ್ಸ್ ಮಾಡುತ್ತಾರೆ. ಅವರೊಂದಿಗೆ ಡ್ಯಾನ್ಸ್ ಮಾಡಲು ಅವಕಾಶ ಸಿಕ್ಕಿರೋದು ನನಗೆ ಹೆಮ್ಮೆ ಎನಿಸುತ್ತಿದೆ. ನನ್ನ ಕನಸು ನನಸಾದ ಕ್ಷಣ ಇದು ಎಂದು ಇನ್ ಸ್ಟಾಗ್ರಾಂ ಖಾತೆಯಲ್ಲಿ ಸಂಯುಕ್ತ ಹೆಗ್ಡೆ ಬರೆದುಕೊಂಡಿದ್ದಾರೆ.




