Ragini Dwivedi: ತಮಿಳು ಚಿತ್ರದಲ್ಲಿ ಬ್ಯುಸಿಯಾದ ನಟಿ ರಾಗಿಣಿ ದ್ವಿವೇದಿ

ಕೆಲವೊಂದಷ್ಟು ವಿವಾದದ ಬಳಿಕ ತುಪ್ಪದ ಹುಡುಗಿ ರಾಗಿಣಿ ಮತ್ತೆ ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. ಒಂದರ ಹಿಂದೊದರಂತೆ ಸಿನಿಮಾಗಳಿಗೆ ಬಣ್ಣ ಹಚ್ಚುತ್ತಿರೋ ರಾಗಿಣಿ ಇದೀಗ ತಮಿಳು ಚಿತ್ರರಂಗದತ್ತ ಮುಖ ಮಾಡಿದ್ದು ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ.
ಸುದೀಪ್ ನಟನೆಯ ವೀರಾ ಮದಕರಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ನಟಿ ರಾಗಿಣಿ ದ್ವಿವೇದಿ ಮೊದಲ ಚಿತ್ರದಲ್ಲೇ ರಾತ್ರೋ ರಾತ್ರಿ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡಿದ್ದರು, ಬಳಿಕ ಕೆಂಪೇಗೌಡ, ಕಳ್ಳಮಳ್ಳಸುಳ್ಳ, ರಾಗಿಣಿ ಐಪಿಎಸ್ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಜನಪ್ರಿಯತೆ ಗಳಿಸಿದರು. ಆದ್ರೆ ಇತ್ತೀಚೆಗೆ ಡ್ರಗ್ ಕೇಸ್ನಲ್ಲಿ ರಾಗಿಣಿ ಹೆಸರು ಕೇಳಿಬಂದಿದ್ದು ಆ ಬಳಿಕ ಕೊಂಚ ಸೈಲೆಂಟ್ ಆಗಿದ್ರು. ಇದೀಗ ಅವೆಲ್ಲವುಗಳಿಂದ ಹೊರ ಬಂದಿರೋ ನಟಿ ಪರಭಾಷೆಯ ಸಿನಿಮಾಗಳಲ್ಲೂ ಬ್ಯುಸಿಯಾಗಿದ್ದಾರೆ.
ತಿರುಜ್ಞಾನಮ್ ನಿರ್ದೇಶನ ಮಾಡುತ್ತಿರುವ ತಮಿಳಿನ ಒನ್ ಟು ಒನ್ ಚಿತ್ರದಲ್ಲಿ ರಾಗಿಣಿ ಬಣ್ಣ ಹಚ್ಚುತ್ತಿದ್ದು ಸಂಕ್ರಾಂತಿ ಹಬ್ಬದ ಪ್ರಯುಕ್ತ ಚಿತ್ರದ ಮುಹೂರ್ತ ನೆರವೇರಿಸಲಾಗಿದೆ. ಫ್ಯಾಮಿಲಿ ಡ್ರಾಮ ಕಥೆಯನ್ನೊಳಗೊಂಡಿರೋ ಒನ್ ಟು ಒನ್ ಚಿತ್ರದಲ್ಲಿ ರಾಗಿಣಿ ಹೋಮ್ಲಿ ಲುಕ್ನಲ್ಲಿ ಕಾಣಿಸಿಕೊಳ್ತಿದ್ದು ಈಗಾಗ್ಲೆ ಚಿತ್ರದ ಶೂಟಿಂಗ್ ಆರಂಭವಾಗಿದೆ.




