ವದಂತಿಗಳಿಗೆ ತಲೆ ಕೆಡಿಸಿಕೊಂಡ ನಟಿ ಕೃತಿ ಶೆಟ್ಟಿ

ಸಣ್ಣ ವಯಸ್ಸಿನಲ್ಲೇ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ನಟಿ ಕೃತಿ ಶೆಟ್ಟಿ ಟಾಲಿವುಡ್ನಲ್ಲಿ ಸಾಕಷ್ಟು ಡಿಮ್ಯಾಂಡ್ ಕ್ರಿಯೇಟ್ ಮಾಡಿದ್ದಾರೆ. ಮೊದಲ ಸಿನಿಮಾದಲ್ಲೇ ನಿರೀಕ್ಷೆ ಮೂಡಿಸಿರುವ ಕೃತಿ ಶೆಟ್ಟಿ ಕೈಯಲ್ಲಿ ಇದೀಗು ಮೂರು ಸಿನಿಮಾಗಳಿವೆ.

ಸಿನಿ ರಂಗದಲ್ಲಿ ಖ್ಯಾತಿಯ ಜೊತೆಗೆ ಕೆಲವೊಮ್ಮೆ ನೆಗೆಟಿವ್ ವಿಷಯಕ್ಕೂ ಸುದ್ದಿಯಾಗೋದು ಕಾಮನ್. ಕೆಲವರು ಇದನ್ನ ಸಿಂಪಲ್ ಆಗಿ ತೆಗೆದುಕೊಂಡ್ರೆ ಮತ್ತೊಂದಷ್ಟು ಮಂದಿ ಸೀರಿಯಸ್ ಆಗಿ ತೆಗೆದುಕೊಳ್ತಾರೆ. ಇದೀಗ ಕೃತಿ ಶೆಟ್ಟಿ ಬಗ್ಗೆ ಗಂಭೀರ ವಿಷಯವೊಂದು ಕೇಳಿ ಬಂದಿದ್ದು ಇದಕ್ಕೆ ಕೃತಿ ಶೆಟ್ಟಿ ಸಖತ್ ಅಪ್ಸೆಟ್ ಆಗಿದ್ದಾರೆ.

ಕೃತಿ ಶೆಟ್ಟಿಗೆ ಸೆಟ್ನಲ್ಲಿ ಶಿಸ್ತಿಲ್ಲ ಅನ್ನೋ ಮಾತು ಕೇಳಿ ಬರ್ತಿದೆ. ಸೆಟ್ಗೆ ಸರಿಯಾದ ಸಮಯಕ್ಕೆ ಬರುವುದಿಲ್ಲ. ಅವರಿಗಾಗಿ ಇಡೀ ಚಿತ್ರತಂಡವೇ ಕಾದು ಕೂರಬೇಕು. ಇದರಿಂದ ಶೂಟಿಂಗ್ಗೆ ಸಮಸ್ಯೆಯಾಗುತ್ತದೆ ಎಂದು ಚಿತ್ರತಂಡದವರು ಕೃತಿ ಮೇಲೆ ದೂರಿದ್ದಾರೆ.

ಚಿತ್ರತಂಡ ಹೇಳಿಕೆಯಿಂದ ಕೃತಿ ಶೆಟ್ಟಿ ಫುಲ್ ಅಪ್ಸೆಟ್ ಆಗಿದ್ದಾರಂತೆ. ಈ ಬಗ್ಗೆ ತಮ್ಮ ಪಿಆರ್ ತಂಡಕ್ಕೆ ಸ್ಪಷ್ಟನೆ ನೀಡುವಂತೆ ಸೂಚನೆ ನೀಡಿದ್ದಾರಂತೆ. ನಟಿ, ನಟಿಯರ ಕುರಿತಾಗಿ ಇಂತಹ ವದಂತಿಗಳು ಕಾಮನ್. ಇದರ ಬಗ್ಗೆ ಅಪ್ ಸೇಟ್ ಆಗುವ ಅಗತ್ಯವಿಲ್ಲ ಎಂದು ಪಿಆರ್ ತಂಡದವರು ಕೃತಿ ಶೆಟ್ಟಿಗೆ ಹೇಳಿದ್ದಾರಂತೆ.

ಈಗಾಗಲೇ ಈ ರೀತಿಯ ವದಂತಿಗಳು ಹುಟ್ಟಿಕೊಂಡರೆ ಮುಂದೆ ವೃತ್ತಿ ಜೀವನಕ್ಕೆ ದೊಡ್ಡ ಹೊಡೆತ ಬೀಳಬಹುದು. ಮುಂದಿನ ದಿನಗಳಲ್ಲಿ ನಿರ್ಮಾಪಕರು ಸಿನಿಮಾಗೆ ಸೆಲೆಕ್ಟ್ ಮಾಡಲು ಹಿಂದೇಟು ಹಾಕಬಹುದು ಅನ್ನೋದು ಕೃತಿ ಶೆಟ್ಟಿ ಅವರ ಚಿಂತೆಯಂತೆ.




