Breaking Newsಮನರಂಜನೆಸಿನಿಮಾಸೆಲೆಬ್ರಿಟಿ

‘ಸೂರರೈ ಪೊಟ್ರು’ ಹಿಂದಿ ರಿಮೇಕ್ ಗೆ ಮದ್ರಾಸ್ ಹೈಕೋರ್ಟ್ ನಿಂದ ತಡೆ

ನಟ ಸೂರ್ಯ ಅಭಿನಯದ ಸೂರರೈ ಪೊಟ್ರು ಸಿನಿಮಾ ಅಭಿಮಾನಿಗಳಿಂದ ಮತ್ತು ವಿಮರ್ಶಕರಿಂದ ಹೆಚ್ಚಿನ ಪ್ರಶಂಸೆ ಪಡೆದಿದೆ. ಕಡಿಮೆ ಬೆಲೆಯ ಸಾರಿಗೆ ವಿಮಾನಯಾನ ಸಂಸ್ಥೆಯನ್ನು ಆರಂಭಿಸಲು ಬಯಸುತ್ತಿರುವ ಮಾಜಿ ಪೈಲಟ್ ಆಗಿ ಸೂರ್ಯ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಈ ಚಿತ್ರವನ್ನು ಹಿಂದಿ ಭಾಷೆಗೆ ರಿಮೇಕ್ ಮಾಡಲು ಮುಂದಾಗಿದ್ದಾರೆ. ಆದರೆ ಇದಕ್ಕೆ ಮದ್ರಾಸ್ ಹೈಕೋರ್ಟ್ ತಡೆ ನೀಡಿದೆ.

‘ಸೂರರೈ ಪೊಟ್ರು’ ಚಿತ್ರವನ್ನು ಗುನಿತ್ ಮೊಂಗಾ ಅವರ ಸಿಖ್ಯ ಎಂಟರ್ ಟೈನ್ ಮೆಂಟ್ ಸಂಯೋಗದಲ್ಲಿ ನಟ ಸೂರ್ಯರವರ 2 ಡಿ ಎಂಟರ್ ಟೈನ್ ಮೆಂಟ್ ನಿರ್ಮಾಣ ಮಾಡಿದೆ. ಆದರೆ ಇದರ ಹಿಂದಿ ರಿಮೇಕ್ ಹಕ್ಕುಗಳನ್ನು ಸಹ ನಿರ್ಮಾಪಕರ ಅನುಮತಿ ಇಲ್ಲದೇ , ಒಪ್ಪಂದದ ಬದ್ಧತೆಗಳನ್ನು ಪಾಲಿಸದೆ ನಟ ಸೂರ್ಯ ಮಾರಾಟ ಮಾಡಿದ್ದಾರೆ. ಹಾಗಾಗಿ ಸಿಖ್ಯ ಎಂಟರ್ ಟೈನ್ ಮೆಂಟ್ ನ ಗುನಿತ್ ಮೊಂಗಾ ಅವರು ನ್ಯಾಯಾಯದ ಮೊರೆ ಹೋಗಿ ಹಿಂದಿ ರಿಮೇಕ್ ಗೆ ತಡೆಯಾಜ್ಞೆ ನೀಡಿದ್ದಾರೆ.

ಈ ಪ್ರಕರಣ ಮದ್ರಾಸ್ ಹೈಕೋರ್ಟ್ ನಲ್ಲಿ ವಿಚಾರಣೆಗೆ ಬಂದಿದ್ದು, ಈ ಪ್ರಕರಣವನ್ನು ಆಲಿಸಿದ ನ್ಯಾಯಾಧೀಶರು ‘ಸೂರರೈ ಪೊಟ್ರು’ ಹಿಂದಿ ರಿಮೇಕ್ ಗೆ ತಡೆಯಾಜ್ಞೆ ನೀಡಿದ್ದಾರೆ. ಮತ್ತು ಸ್ನೇಹಪರವಾಗಿದ್ದು ಪರಿಹಾರ ಕಂಡುಕೊಳ್ಳುವಂತೆ ಎರಡೂ ತಂಡಗಳಿಗೆ ಸಲಹೆ ನೀಡಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button