ಮನರಂಜನೆಸಿನಿಮಾಸೆಲೆಬ್ರಿಟಿ

ಪುನೀತ್ ರಾಜ್​ಕುಮಾರ್ ನಿಧನದ ಹಿಂದಿನ ದಿನವಷ್ಟೇ ಭೇಟಿ ಮಾಡಿದ್ದೆ: ಶ್ರೇಯಸ್ ಮಂಜು

ನಟ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಅಗಲಿ ಮೂರು ತಿಂಗಳು ಕಳೆದಿದ್ರು ಇಂದಿಗೂ ಅವರ ನೆನಪು ಮಾತ್ರ ಕಿಂಚಿತ್ತು ಕಮ್ಮಿಯಾಗಿಲ್ಲ. ನಿತ್ಯ ಲಕ್ಷಾಂತರ ಅಭಿಮಾನಗಳು ಅಪ್ಪು ಹೆಸರನ್ನ ಜಪ ಮಾಡ್ತಿದ್ದಾರೆ. ಯಾವುದೇ ಪ್ರೆಸ್ ಮೀಟ್ ಇರ್ಲಿ ಅಲ್ಲಿ ಅಪ್ಪು ಹೆಸರು ಇಲ್ಲದೆ ಪ್ರೆಸ್ ಮೀಟ್ ಶುರುವಾಗೋದೆ ಇಲ್ಲ. ಇದೀಗ ನಟ ಶ್ರೇಯಸ್ ಪುನೀತ್ ರಾಜ್​ಕುಮಾರ್ ಸಾಯುವ ಹಿಂದಿನ ದಿನ ಭೇಟಿ ಮಾಡಿದ್ದ ಸಂದರ್ಭವನ್ನ ನೆನಪು ಮಾಡಿಕೊಂಡಿದ್ದಾರೆ.

ಶ್ರೇಯಸ್ ನಟನೆಯ ರಾಣ ಸಿನಿಮಾದ ಸಾಂಗ್ ರಿಲೀಸ್ ಕಾರ್ಯಕ್ರಮದಲ್ಲಿ ಪುನೀತ್ ಅವರನ್ನ ನೆನಪಿಸಿಕೊಂಡಿದ್ದಾರೆ. ಅದೊಂದು ದಿನ ನಾನು ಗಾಂಧಿನಗರದಲ್ಲಿರುವ ಜಯಣ್ಣ ಅವ್ರ ಕಚೇರಿಗೆ ಹೋಗಿದ್ದೆ. ವಾಪಸ್ ಬರುವಾಗ ಅದೇ ಪ್ಲೋರ್​ನ ಮೇಲು ಗಡೆ ಅಪ್ಪು ಸಾರ್ ಇದ್ದಾರೆ ಅನ್ನೋದು ಗೊತ್ತಾಯ್ತು. ತಕ್ಷಣವೇ ಹೋಗಿ ಪುನೀತ್ ಅವರನ್ನ ಭೇಟಿಯಾದೆ. ಜೊತೆಗೆ ನನ್ನ ಸಿನಿಮಾಗೆ ಇಮ್ರಾನ್ ಸಾರ್ ಕೊರಿಯಾಗ್ರಾಫಿ ಮಾಡಿದ್ದಾರೆ ಚಿತ್ರದ ಹಾಡುಗಳನ್ನ ನಿಮಗೆ ತೋರಿಸುತ್ತೇನೆ ಎಂದು ಹೇಳಿದೆ. ಅವ್ರು ತುಂಬಾ ಖುಷಿ ಪಟ್ಟರು. ಆದ್ರೆ ಇಂದು ಪುನೀತ್ ರಾಜ್​ಕುಮಾರ್ ನಮ್ಮ ಜೊತೆ ಇಲ್ಲ ಅವರನ್ನ ಸಾಕಷ್ಟು ಮಿಸ್ ಮಾಡಿಕೊಳ್ತಿದ್ದೇನೆ ಎಂದು ಶ್ರೇಯಸ್ ಹೇಳಿದರು.

ಇದೇ ವೇಳೆ ಮಾತನಾಡಿದ ಶ್ರೇಯಸ್ ತಮಿಳು ನಾಡಿನಲ್ಲಿ ಕಲಾವಿದರನ್ನ ಯಾವ ರೀತಿ ಪ್ರೀತಿಸುತ್ತಾರೆ ಅನ್ನೋದನ್ನ ಹೇಳಿದರು. ರಾಣಾ ಸಿನಿಮಾದ ಸಾಂಗ್ ಶೂಟಿಂಗ್ ಸಮಯದಲ್ಲಿ ಒಂದು ದಿನ ಬ್ರೇಕ್ ತೆಗೆದುಕೊಂಡು ಹೈದರಾಬಾದ್​ಗೆ ಹೋಗಿದ್ದೆ. ಅಲ್ಲಿ ಚಿರಂಜೀವಿ ಸಾರ್ ಬರುತ್ತಿದ್ದರು. ಈ ವೇಳೆ ಅಲ್ಲಿದ ಜನ ಚಿರಂಜೀವಿ ಸಾರ್, ನಮ್ ಅಣ್ಣ ಬರ್ತಿದ್ದಾರೆ ಎಂದು ಸಾಕಷ್ಟು ಖುಷಿ ವ್ಯಕ್ತಪಡಿಸಿದ್ರು. ದೂರದಲ್ಲಿರೋ ಹಿರೋವನ್ನ ಸಾಕಷ್ಟು ಪ್ರೀತಿಸ್ತಾರೆ. ನಾವು ಕೂಡ ನಮ್ಮ ಹಿರೋಗಳನ್ನ ಅಷ್ಟೇ ಇಷ್ಟ ಪಡಬೇಕು ಎಂದರು.

ನಂದಕಿಶೋರ್ ನಿರ್ದೇಶನದ ರಾಣ ಸಿನಿಮಾದಲ್ಲಿ ಶ್ರೇಯಸ್​ಗೆ ಜೋಡಿಯಾಗಿ ನಟಿ ರೀಷ್ಮಾ ನಾಣಯ್ಯ ಹಾಗೂ ರಜನಿ ಭಾರದ್ವಾಜ್ ಕಾಣಿಸಿಕೊಂಡಿದ್ದಾರೆ. ಕೆ.ಮಂಜು ನಿರ್ಮಾಣದಲ್ಲಿ ಮೂಡಿ ಬರ್ತಿರುವ ಸಿನಿಮಾದ ಒಂದು ಹಾಡು ಮಾತ್ರ ಭಾಕಿ ಇದ್ದು ಟಾಕಿ ಪೋರ್ಷನ್ ಚಿತ್ರೀಕರಣ ಕಂಪ್ಲೀಟ್ ಆಗಿದೆ.

Spread the love

Related Articles

Leave a Reply

Your email address will not be published. Required fields are marked *

Back to top button