Latestಮನರಂಜನೆಸಿನಿಮಾಸೆಲೆಬ್ರಿಟಿ

ಶೀಘ್ರದಲ್ಲೇ ದರ್ಶನ್ ಅಭಿನಯದ ಕ್ರಾಂತಿ ಸಿನಿಮಾ ಶೂಟಿಂಗ್ ಆರಂಭ

ಚಿತ್ರರಂಗದ ಕೆಲಸ ಕಾರ್ಯ ಚಟುವಟಿಕೆಗಳು ಹಂತ ಹಂತವಾಗಿ ಚೇತರಿಸಿಕೊಳ್ಳುವಷ್ಟರಲ್ಲಿ ಮತ್ತೆ ಸಂಕಷ್ಟ ಎದುರಾಗಿದೆ. ರಾಜ್ಯದಲ್ಲಿ ಮತ್ತೆ ಕೊರೋನಾ ಹಾವಳಿ ಹೆಚ್ಚಾಗಿದೆ. ಇದ್ದರಿಂದ ಚಿತ್ರರಂಗಕ್ಕೆ ಭೀತಿ ಶುರುವಾಗಿದೆ.

ಹೌದು ಕೊರೋನಾ ಆತಂಕ ಸೃಷ್ಟಿಸಿದ್ದು, ಮತ್ತೆ ಎಲ್ಲಿ ಲಾಕ್ ಡೌನ್ ಆಗುತ್ತದೆಯೋ ಎಂಬ ಭಯ ಕಾಡುತ್ತಿದೆ. ಇನ್ನು ಸಿನಿಮಾ ಶೂಟಿಂಗ್ ಸಹ ಅರ್ಧಕ್ಕೆ ನಿಲ್ಲುತ್ತದೆ ಎಂಬ ಮಾಹಿತಿಗಳು ಕೇಳಿಬರುತ್ತಿದೆ.

ಅಂದಹಾಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಸಿನಿಮಾ ಕ್ರಾಂತಿ ಅಭಿಮಾನಿಗಳಿಗೆ ಕೂತುಹಲ ಮೂಡಿಸಿದೆ. ಈಗಾಗಲೇ ಟೀಸರ್ ನೋಡಿ ಅಭಿಮಾನಿಗಳು ಚಿತ್ರ ಬಿಡುಗಡೆಗಾಗಿ ಕಾದು ಕುಳಿತಿದ್ದಾರೆ.ಆದರೆ, ಕೊರೊನಾ ಮೂರನೇ ಅಲೆ ಆರಂಭ ಆಗಿದ್ದರಿಂದ ‘ಕ್ರಾಂತಿ’ ಸಿನಿಮಾ ಶೂಟಿಂಗ್ ನಿಂತು ಹೋಗಿದ್ಯಾ? ಅನ್ನುವ ಆತಂಕಕ್ಕೆ ಕಾಡತೊಡಗಿತ್ತು. ಹೀಗಾಗಿ ಕ್ರಾಂತಿ ಬಗ್ಗೆ ನಿರ್ಮಾಪಕಿ ಶೈಲಜಾ ನಾಗ್ ಗೊಂದಲವನ್ನು ತಳ್ಳಿ ಹಾಕಿದ್ದಾರೆ.

ಕೊರೊನಾದಿಂದ ಸಿನಿಮಾ ಶೂಟಿಂಗ್ ನಿಲ್ಲಿಸಿಲ್ಲ. ಇನ್ನು ಮೂರು ನಾಲ್ಕು ದಿನಗಳಲ್ಲಿ ಮತ್ತೆ ಚಿತ್ರೀಕರಣ ಆರಂಭ ಮಾಡಲಾಗಿದೆ ಎಂದಿದ್ದಾರೆ. ಇದನ್ನು ನೋಡಿ ಅಭಿಮಾನಿಗಳು ನಿಟ್ಟುಸಿರುಬಿಟ್ಟಿದ್ದಾರೆ. ಈಗಾಗಲೇ ಶೇ. 30 ರಷ್ಟು ಸಿನಿಮಾ ಶೂಟಿಂಗ್ ಅನ್ನು ಮುಗಿಸಿದ್ದೇವೆ. ಹೊರಗಡೆ ನೆಗೆಟಿವಿಟಿ ಜಾಸ್ತಿ ಇದೆ. ಯಾರು ನೋಡಿದರೂ ಕೊರೊನಾ ಬಗ್ಗೆನೇ ಮಾತಾಡುತ್ತಾರೆ. ಹೀಗಾಗಿ ಆದಷ್ಟು ಬೇಗ ಶೂಟಿಂಗ್ ಮುಗಿಸಬೇಕು ಎಂದು ಚಿತ್ರತಂಡ ನಿರ್ಧರಿಸಿದೆ.

ಕರ್ನಾಟಕದಲ್ಲಿ ಕೊರೊನಾ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ವಿದೇಶದಲ್ಲಿ ಚಿತ್ರೀಕರಿಸಬೇಕಿರುವ ಭಾಗವನ್ನು ಶೂಟ್ ಮಾಡಲಾಗುತ್ತೆ ಎಂದು ತಿಳಿದುಬಂದಿದೆ.
ಈ ಚಿತ್ರಕ್ಕೆ ಹರಿಕೃಷ್ಣ ನಿರ್ದೇಶ ಮಾಡುತ್ತಿದ್ದಾರೆ. ದರ್ಶನ್ ಗೆ ಜೋಡಿಯಾಗಿ ರಚಿತಾ ರಾಮ್ ಬಣ್ಣ ಹಚ್ಚಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button