ಮನರಂಜನೆಸಿನಿಮಾಸೆಲೆಬ್ರಿಟಿ

ಅಪ್ಪು ನೆನೆದು ಗಳ ಗಳನೆ ಅತ್ತ ಜಗ್ಗೇಶ್, ಸಂತೋಷ್ ಆನಂದ್ ರಾಮ್

ನಟ ಪುನೀತ್ ರಾಜ್​ಕುಮಾರ್ ಅಗಲಿ ಮೂರು ತಿಂಗಳು ಕಳೆಯುತ್ತ ಬಂದಿದೆ. ಆದ್ರೆ ಇಂದಿಗೂ ಅದೆಷ್ಟೋ ಮಂದಿಗೆ ಅಪ್ಪು ಇಲ್ಲ ಅನ್ನೋ ನೋವನ್ನ ಅರಗಿಸಿಕೊಳ್ಳೋಕೆ ಸಾಧ್ಯವಾಗ್ತಿಲ್ಲ. ಪುನೀತ್ ಅವರನ್ನ ನೆನಪು ಮಾಡಿಕೊಂಡು ಇಂದಿಗೂ ಲಕ್ಷಾಂತರ ಮಂದಿ ಕಣ್ಣೀರು ಹಾಕ್ತಿದ್ದಾರೆ. ಇದೀಗ ಜಗ್ಗೇಶ್ ನಟನೆಯ ರಾಘವೇಂದ್ರ ಚಿತ್ರತಂಡ ಅಪ್ಪು ನೆನಪಿನಲ್ಲಿ ಮತ್ತೆ ಕಣ್ಣೀರು ಹಾಕಿದೆ.

ಜಗ್ಗೇಶ್ ನಟನೆಯ ರಾಘವೇಂದ್ರ ಸ್ಟೋರಿ ಸಿನಿಮಾದ ಶೂಟಿಂಗ್ ನಡೆಯುತ್ತಿದ್ದು ದಿನದ ಆಗು ಹೋಗುಗಳನ್ನ ಜಗ್ಗೇಶ್ ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚೆಗೆ ರಾಘವೇಂದ್ರ ಸ್ಟೋರ್ಸ್ ಚಿತ್ರದ ಚಿತ್ರೀಕರಣ ಮುಗಿಸಿ ಊಟಕ್ಕೆ ಕುಳಿತಿದ್ದಾರೆ. ಈ ವೇಳೆ ಪುನೀತ್ ನೆನಪು ಮಾಡಿಕೊಂಡು ಕಣ್ಣೀರು ಹಾಕಿದ್ದಾಗಿ ಜಗ್ಗೇಶ್ ಬರೆದುಕೊಂಡಿದ್ದಾರೆ.

“ಮೊನ್ನೆ ರಾತ್ರಿ ರಾಘವೇಂದ್ರ ಸ್ಟೋರ್ಸ್ ಚಿತ್ರೀಕರಣ ಮುಗಿದು ಊಟಕ್ಕೆ ಕೂತಾಗ ಈ ನನ್ನ ಮುದ್ದು ನೆನಪಾಗಿ ನಾನು ಸಂತೋಷ ಆನಂದರಾಮ, ನಟ ರವಿಗೌಡ ಹುಚ್ಚರಂತೆ ಅತ್ತು ಬಿಟ್ಟೆವು. ನನ್ನ ಮನಸ್ಸಿಗೆ ಪುನೀತ್ ಇಲ್ಲಾ ಅಂತ ರಿಜಿಸ್ಟರ್ ಆಗುತ್ತಿಲ್ಲಾ ಎಂದು ಬರೆದುಕೊಂಡು ಕಣ್ಣೀರು ಹಾಕುತ್ತಿರುವ ಇಮೋಜಿ ಹಾಕಿದ್ದಾರೆ. ಜೊತೆಗೆ ಅಪ್ಪು ಅವರ ಜೊತೆಗೆ ಇರುವ ವಿಡಿಯೋವೊಂದನ್ನ ಶೇರ್ ಮಾಡಿದ್ದಾರೆ.

ನಟ ಜಗ್ಗೇಶ್, ಸಂತೋಷ್ ಆನಂದ್ ರಾಮ್ ನಟನೆಯ ರಾಘವೇಂದ್ರ ಸ್ಟೋರ್ಸ್ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ತೀರ್ಥಹಳ್ಳಿಯಲ್ಲಿ ಚತ್ರೀಕರಣ ನಡೆಯುತ್ತಿದ್ದು ಕವಿಶೈಲ ಕುಪ್ಪಳ್ಳಿಗೆ ಭೇಟಿ ನೀಡಿದ ಪೋಟೋಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

ನಿರ್ದೇಶಕ ಸಂತೋಷ್ ಆನಂದ್ ರಾಮ್ ಪುನೀತ್ ರಾಜ್​ಕುಮಾರ್ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದರು. ಪುನೀತ್ ನಟನೆಯ ರಾಜಕುಮಾರ ಹಾಗೂ ಯುವರತ್ನ ಸಿನಿಮಾಗಳನ್ನ ನಿರ್ದೇಶನ ಮಾಡಿದ್ದ ಸಂತೋಷ್ ಆನಂದ್ ರಾಮ್ ಮತ್ತಷ್ಟು ಸಿನಿಮಾಗಳನ್ನ ಅಪ್ಪು ಜೊತೆ ಮಾಡಲು ತಯಾರಾಗಿದ್ದರು. ಆದ್ರೆ ಅದಕ್ಕೂ ಮೊದಲೇ ಅಪ್ಪು ಅಗಲಿ ಬಿಟ್ಟರು. ಇದೀಗ ಅಪ್ಪುಗಾಗಿ ರೆಡಿಮಾಡಿದ್ದ ಕಥೆಯನ್ನ ಯುವರಾಜ್​ಕುಮಾರ್​ ಗೆ ನಿರ್ದೇಶನ ಮಾಡಲು ಮಾಡಲು ಮುಂದಾಗಿದ್ದಾರೆ.  

Spread the love

Related Articles

Leave a Reply

Your email address will not be published. Required fields are marked *

Back to top button