ಜಿಲ್ಲಾ ಸುದ್ದಿಮೈಸೂರು
ಮೈಸೂರು ಮೃಗಾಲಯದಲ್ಲಿ ಹೆಣ್ಣು ಮರಿಗೆ ಜನ್ಮ ನೀಡಿದ ಜೀಬ್ರಾ

ಮೈಸೂರು: ಮೈಸೂರು ಮೃಗಾಲಯದಲ್ಲಿ ಪ್ರಾಚಿ ಎಂಬ ಜೀಬ್ರಾ ಹೆಣ್ಣು ಮರಿಗೆ ಜನ್ಮ ನೀಡಿದೆ. ಡಿಸೆಂಬರ್ 11ರಂದು ಪ್ರಾಚಿ ಜೀಬ್ರಾ ಮರಿಗೆ ಜನ್ಮ ನೀಡಿದ್ದು, ಮರಿ ಹಾಗೂ ತಾಯಿ ಪ್ರಾಚಿ ಆರೋಗ್ಯದಿಂದಿವೆ.
ಪ್ರಾಚಿ ಮತ್ತು ರಿಷಿ ಜೀಬ್ರಾಗಳಿಗೆ ಈ ಮರಿಯು ಜನಿಸಿದ್ದು, ಮೈಸೂರು ಮೃಗಾಲಯದ ಇತಿಹಾಸದಲ್ಲಿ ಮೃಗಾಲಯದಲ್ಲಿಯೇ ಜನಿಸಿದ ಐದನೇ ಜೀಬ್ರಾ ಮರಿ ಇದಾಗಿದೆ.
ಪ್ರಾಚಿಗೆ ಇದು ಎರಡನೇ ಮರಿ ಎಂದು ತಿಳಿದುಬಂದಿದೆ. ಪ್ರಸ್ತುತ 3 ಗಂಡು ಮತ್ತು 5 ಹೆಣ್ಣು ಜೀಬ್ರಾಗಳು ಮೈಸೂರು ಮೃಗಾಲಯದಲ್ಲಿವೆ. ಈ ಹೊಸ ಮರಿಯು ಮೃಗಾಲಯಕ್ಕೆ ಸೇರಿರುವುದಕ್ಕೆ ಮೃಗಾಲಯ ಸಿಬ್ಬಂದಿ ಸಂತಸ ಪಟ್ಟಿದ್ದಾರೆ.




