ಜಿಲ್ಲಾ ಸುದ್ದಿಹುಬ್ಬಳ್ಳಿ - ಧಾರವಾಡ

ಮಾಜಿ ಸಚಿವ ವಿನಯ್ ಕುಲರ್ಣಿ ಅರ್ಜಿ ವಿಚಾರಣೆ ಜುಲೈ 26 ಕ್ಕೆ ಮುಂದೂಡಿದ ಸುಪ್ರೀಂ ಕೋರ್ಟ್‌

ನವದೆಹಲಿ: ಜಿಲ್ಲಾ ಪಂಚಾಯತಿ ಸದಸ್ಯ ಯೋಗೇಶಗೌಡ ಗೌಡರ ಕೊಲೆ ಪ್ರಕರಣದಲ್ಲಿ ಸಿಬಿಐ‌ನಿಂದ ಬಂಧನಕ್ಕೆ ಒಳಗಾಗಿ, ಸದ್ಯ ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ಇರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಅರ್ಜಿಯು ಇಂದು ಸುಪ್ರೀಂ ಕೋರ್ಟ್​​ನಲ್ಲಿ ನಡೆಯಿತು. ವಿಚಾರಣೆ ನಡೆಸಿ ಗೌರವಾನ್ವಿತ ನ್ಯಾಯಾಧೀಶರು ಬಳಿಕ ಜುಲೈ 26 ಕ್ಕೆ ವಿಚಾರಣೆ ಮುಂದೂಡಿ ಆದೇಶ ಹೋರಡಿಸಿದರು‌.

ಮಾಜಿ ಸಚಿವ ವಿನಯ್ ಕುಲಕರ್ಣಿ ಪರವಾಗಿ ಜಾಮೀನು ಕೋರಿ ಹಾಗೂ ಸಿಬಿಐ ದಾಖಲಿಸಿರುವ ಎಫ್ ಐ ಆರ್ ರದ್ದು ಕೋರಿ ಎರಡು ಅರ್ಜಿಗಳನ್ನು ಸಲ್ಲಿಸಲಾಯಿತು. ಜಾಮೀನು ವಿಚಾರವಾಗಿ ಹಿರಿಯ ನ್ಯಾಯವಾದಿ ಮುಕುಲ್ ರೋಟಗಿ ಹಾಗೂ ಸಿಬಿಐ ಎಫ್ ಐ ಆರ್ ರದ್ದು ಕೋರಿ ಪರ ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್ ಅವರು ತಮ್ಮ ವಾದಗಳನ್ನು ಮಂಡಿಸಿದರು.

ಇನ್ನೂ ವಿನಯ್ ಕುಲಕರ್ಣಿ ಪರ ನ್ಯಾಯವಾದಿಗಳ ವಾದವನ್ನು ಆಲಿಸಿದ ನ್ಯಾಯಾಧೀಶರು, ಸಿಬಿಐಗೆ ನೋಟಿಸ್ ಜಾರಿ‌ ಮಾಡಿ, ಜುಲೈ 24ರ ಒಳಗಾಗಿ ತಕಾರಾರು ಸಲ್ಲಿಸಲು ಕಾಲಾವಕಾಶ ನೀಡಿ ವಿಚಾರಣೆಯನ್ನು ಮುಂದೂಡಲಾಯಿತು.

ಜುಲೈ 24ರ ಒಳಗಾಗಿ ಸಿಬಿಐ ಪರ ವಕೀಲರು ಯಾವೆಲ್ಲಾ ಅಂಶಗಳನ್ನು ನ್ಯಾಯಾಧೀಶರ ಮುಂದೆ ಇಡುತ್ತಾರೆ ಎಂಬುವುದು ಈಗ‌ ಕುತೂಹಲ ಮೂಡಿಸಿದ್ದು, ಜೂಲೈ 26ರ ವಿಚಾರಣೆ ಬಳಿಕವಷ್ಟೇ ಮಾಜಿ ಸಚಿವ ವಿನಯ್ ಕುಲಕರ್ಣಿ ಸಲ್ಲಿಸಿದ ಎರಡು ಅರ್ಜಿಗಳ ಭವಿಷ್ಯ ಎನ್ನಾಗುತ್ತದೆ ಎಂಬುವುದು ಕಾದು ನೋಡಬೇಕಾಗಿದೆ.

Spread the love

Related Articles

Leave a Reply

Your email address will not be published. Required fields are marked *

Back to top button