ಜಿಲ್ಲಾ ಸುದ್ದಿರಾಮನಗರ

ವಿಶ್ವ ಜನ ದಿನದ ಅಂಗವಾಗಿ ಸೈಕಲ್ ಜಾಥಾ

ರಾಮನಗರ: ವಿಶ್ವ ಜಲ ದಿನದ ಅಂಗವಾಗಿ ಚನ್ನಪಟ್ಟಣ ತಾಲೂಕಿನ ಇಗ್ಗಲೂರಿ ಗ್ಯಾರೇಜ್ ಬಳಿಯಿಂದ ಗಾಂಧಿ ಭವನದವರೆಗೆ ನಾನಾ ಹಳ್ಳಿಗಳನ್ನು ಸುತ್ತಾಡಿ ನೀರಿನ ಕುರಿತು ಅರಿವು ಮೂಡಿಸಿದರು.

ರಮೇಶ್ ಗೌಡ ಅವರ ನೇತೃತ್ವದಲ್ಲಿ ಜಲ ಮೂಲ ಉಳಿಸಿ, ಮಳೆ ನೀರು ಸಂಗ್ರಹಿಸಿ, ಕೆರೆ ಒತ್ತುವರಿ ನಿಲ್ಲಿಸಿ ಎಂಬ ಘೋಷಣೆಯೊಂದಿಗೆ ಜಾಥಾ ನಡೆಸಲಾಯಿತು.

ಕೆರೆ ಒತ್ತುವರಿ ನಿಲ್ಲಬೇಕು, ಜಲಮೂಲ ಸಂರಕ್ಷಣೆ ಮಾಡಬೇಕು, ಇಲ್ಲವಾದಲ್ಲಿ ಜೀವ ಸಂಕುಲಕ್ಕೆ ಉಳಿಗಾಲವಿಲ್ಲ, ಜಲಮೂಲ ಮಲೀನದಿಂದ ಅನೇಕ ರೋಗ-ರುಜಿನಗಳ ಜತೆಗೆ ಸಮಸ್ಯೆಗಳನ್ನು ಮನುಷ್ಯರೊಟ್ಟಿಗೆ ಪ್ರಾಣಿ ಪಕ್ಷಿಗಳು ಅನುಭವಿಸುವಂತಾಗಿದೆ. ಈ ಬಗ್ಗೆ ನಾವು ಜಾಗೃತರಾಗದ್ದಿರೇ ನಮ್ಮೊಡನೆ ಜೀವ ಸಂಕುಲಕ್ಕೂ ಉಳಿಗಾಲವೆಂದು ವೇದಿಕೆಯ ರಾಜ್ಯಾಧ್ಯಕ್ಷ ರಮೇಶ್ ಗೌಡ ಎಚ್ಚರಿಸಿದರು.

ಬೇಸಾಯ ಮಾಡಲು ನಾವು ಹಿಂದೇಟು ಹಾಕುತ್ತೇವೆ. ಆದರೇ ಕೆರೆ ಒತ್ತುವರಿ ನಡೆಯುತ್ತಿದೆ. ಇದು ತಪ್ಪಬೇಕು, ಇದರ ಬಗ್ಗೆ ತಪಿಸಲು ಮೈಸೂರಿನಿಂದ ಚಿಕ್ಕಬಳ್ಳಾಪುರದವರಗೆ ಸೈಕಲ್ ಜಾಥಾ ಮೂಲಕ ಅರಿವು ಮೂಡಿಸಲಾಗುವುದೆಂದರು.

ವೇದಿಕೆಯ ಜಿಲ್ಲಾಧ್ಯಕ್ಷ ಬೇವೂರು ಯೋಗೇಶ್ ಗೌಡ ಮಾತನಾಡಿ, ಇಂದು ಜಲ ಮೂಲಗಳನ್ನ ನಾವೇ ನಾಶ ಮಾಡುತ್ತಿದ್ದೇವೆ. ಅದರಿಂದಾಗುವ ಎಚ್ಚರಿಕೆ ಬಗ್ಗೆ ನಮಗೆ ಅರಿವಿಗಿರಬೇಕು. ನಾವು ಮಾಡುವ ಒಂದು ತಪ್ಪಿನಿಂದ ಒಂದು ಸಂತತಿಗೆ ಧಕ್ಕೆಯಾದರೇ ಅದಕ್ಕೆ ನಾವೇ ಪಾಲುದಾರಲ್ಲದೇ ನಾವೇ ಅದರ ನಷ್ಟಗಳನ್ನ  ಅನುಭವಿಸಬೇಕೆಂದರು.

Spread the love

Related Articles

Leave a Reply

Your email address will not be published. Required fields are marked *

Back to top button