Breaking Newsಕಲಬುರ್ಗಿಜಿಲ್ಲಾ ಸುದ್ದಿ

ಬಟ್ಟೆ ಒಗೆಯುವಾಗ ನದಿಯಲ್ಲಿ ಕೊಚ್ಚಿಹೋದ ಮಹಿಳೆ

ಕಲಬುರಗಿ : ಬಟ್ಟೆ ಒಗೆಯುವಾಗ ಮಹಿಳೆ ನದಿಯಲ್ಲಿ ಕೊಚ್ಚಿ ಹೋದ ಘಟನೆ ಕಲಬುರಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಸಂಗಾವಿ ಎಂ ಗ್ರಾಮದಲ್ಲಿ ನಡೆದಿದೆ. ಸಂಗಾವಿ ಗ್ರಾಮದ 25 ವರ್ಷದ ಮಾಣಿಕಮ ನದಿಯಲ್ಲಿ ಕೊಚ್ಚಿ ಹೊಗಿರುವ ಮಹಿಳೆ ಎಂದು ಗುರುತಿಸಲಾಗಿದೆ.

ಇಂದು ಬೆಳಿಗ್ಗೆ 10:30 ರ ವೇಳೆಗೆ ಬೆಣ್ಣೆತೋರಾ ಬದಿ ತಟದಲ್ಲಿ ಬಟ್ಟೆ ತೊಳೆಯಲು ಹೋದಾಗ ಏಕಾಏಕಿ ನೀರಿಗೆ ಬಿದ್ದು ಮಹಿಳೆ ನದಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾಳೆ. ನಿರಂತರ ಮಳೆಯಿಂದ ನದಿಯಲ್ಲಿ ನೀರು ರಭಸವಾಗಿ ಹರಿಯುತ್ತಿದ್ದು, ಮಹಿಳೆಗಾಗಿ ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಸ್ಥಳೀಯ ಮೀನುಗಾರರು ಮಹಿಳೆಗಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಘಟನೆ ಹಿನ್ನೆಲೆ ಗ್ರಾಮಸ್ಥರು ನದಿಯತ್ತ ಧಾವಿಸಿದ್ದು, ಮಳಖೇಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದುರ್ಘಟನೆ ಸಂಭವಿಸಿದೆ.

Spread the love

Related Articles

Leave a Reply

Your email address will not be published. Required fields are marked *

Back to top button