ಜಿಲ್ಲಾ ಸುದ್ದಿದಾವಣಗೆರೆ

ರಸ್ತೆಯಲ್ಲಿ ತಹಶೀಲ್ದಾರ್ ರನ್ನು ತರಾಟೆಗೆ ತೆಗೆದುಕೊಂಡ ಮಹಿಳೆ…!

ದಾವಣಗೆರೆ: ಕಳಪೆ ಗುಣಮಟ್ಟದ ಫುಡ್ ಕಿಟ್ ನೀಡಲಾಗುತ್ತಿದೆ ಎಂದು ಆರೋಪಿಸಿ ಮಹಿಳೆಯೊಬ್ಬರು ರಸ್ತೆಯಲ್ಲೇ ಹೊನ್ನಾಳಿ ತಹಶೀಲ್ದಾರ್ ಅವರನ್ನು ತರಾಟೆಗೆ ತೆಗೆದುಕೊಂಡು ವಿಡಿಯೋ ಈಗ ಸಖತ್ ವೈರಲ್ ಆಗುತ್ತಿದೆ.

ತಹಶೀಲ್ದಾರ್ ಗೆ ಕಾರ್ಮಿಕ ಮಹಿಳೆ ಲೆಫ್ಟ್ ರೈಟ್ ತೆಗೆದುಕೊಂಡಿದ್ದು, ರವೆಯಲ್ಲಿ ಹುಳು ಆಗಿವೆ. ನಿಮಗಾದರೂ ನೋಡಿ ಕೊಡಬೇಕು ಅನಿಸಲಿಲ್ವಾ ಎಂದು ಪ್ರಶ್ನಿಸಿದ್ದಾರೆ. ಕಾರ್ಮಿಕ ಮಹಿಳೆಯ ಪ್ರಶ್ನೆಗೆ ತಬ್ಬಿಬ್ಬಾದ ಹೊನ್ನಾಳಿ ತಹಶಿಲ್ದಾರ್ ಬಸವನಗೌಡ ಕೋಟೂರ ಅವರು ಮಹಿಳೆಯನ್ನು ಸಮಾಧಾನಪಡಿಸಲು ಯತ್ನಿಸಿದರೂ ಸುಮ್ಮನಾಗಲಿಲ್ಲ.

ದಾವಣಗೆರೆ ಜಿಲ್ಲೆ ಹೊನ್ನಾಳಿಯಲ್ಲಿ ಪಟ್ಟಣದಲ್ಲಿ ಕಾರ್ಮಿಕ ಇಲಾಖೆಯಿಂದ ಕಟ್ಟಡ ಕಾರ್ಮಿಕರಿಗೆ ಫುಡ್ ಕಿಟ್ ನೀಡಲಾಗ್ತಿದೆ. ಏಳು ಸಾವಿರ ಫುಡ್ ಕಿಟ್ ಕಾರ್ಮಿಕರಿಗೆ ವಿತರಣೆ ಮಾಡಲಾಗಿತ್ತು. ಈ ವೇಳೆ ಫುಡ್ ಕಿಟ್ ನಲ್ಲಿ ಏನಿದೆ ಅಂತ ಕಾರ್ಮಿಕ ಮಹಿಳೆ ಪರಿಶೀಲಿಸಿದಾಗ ಹುಳ ಇದ್ದದ್ದು ಪತ್ತೆಯಾಗಿದೆ. ಇಂತಹ ಕಳಪೆ ಗುಣಮಟ್ಟದ ಆಹಾರ ಪದಾರ್ಥ ನೀಡಿ ಪ್ರಚಾರ ಪಡಿಬೇಡಿ ಅಂತ ಮಹಿಳೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಾಸಕ ರೇಣುಕಾಚಾರ್ಯ ಹಾಗೂ ಅಧಿಕಾರಿಗಳ ನೇತೃತ್ವದಲ್ಲಿ ಕಾರ್ಮಿಕರಿಗೆ ಫುಡ್ ಕಿಟ್ ವಿತರಣೆ ಕಾರ್ಯಕ್ರಮದ ವೇಳೆ ಈ ಘಟನೆ ನಡೆದಿದೆ. ಅಸಂಘಟಿತ ಕಟ್ಟಡ ಕಾರ್ಮಿಕರಿಗೆ ಫುಡ್ ಕಿಟ್ ನೀಡುವ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮ ಮುಗಿದ ಬಳಿಕ ಕಳಪೆ ಕಿಟ್ ಕೊಟ್ಟಿದ್ದಕ್ಕೆ ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೋವಿಡ್ ನಂತಹ ಸಂಕಷ್ಟದ ವೇಳೆಯಲ್ಲಿ ಜನರು ಮೊದಲೇ ಸಮಸ್ಯೆಯಲ್ಲಿದ್ದಾರೆ. ಕಟ್ಟಡ ಕಾರ್ಮಿಕರ ಗೋಳು ಹೇಳತೀರದ್ದಾಗಿದೆ. ಇಂತಹ ವೇಳೆಯಲ್ಲಿ ಕಳಪೆ ಫುಡ್ ಕಿಟ್ ಕೊಟ್ಟರೆ ಹೇಗೆ ಎಂದು ಕಾರ್ಮಿಕರು ಪ್ರಶ್ನೆ ಮಾಡಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button