ಜಿಲ್ಲಾ ಸುದ್ದಿ
ಇನ್ನೂ ಕೆಲ ಸ್ವಾಮೀಜಿಗಳನ್ನು ಭೇಟಿಯಾಗುವೆ: ಯೋಗೀಶ್ವರ್

ರಾಮನಗರ: ನನ್ನ ಒಂದು ಹೇಳಿಕೆ ಇಷ್ಟೊಂದು ದೊಡ್ಡದಾಗುತ್ತದೆ ಎಂದು ಗೊತ್ತಿರಲಿಲ್ಲ. ನಾನು ಬಹಿರಂಗವಾಗಿ ಏನ್ನನ್ನೂ ಹೇಳುವುದಿಲ್ಲ. ರಾಜಕೀಯವಾಗಿ ಮಾತನಾಡುವುದಿಲ್ಲ ಎಂದು ಸಿ ಪಿ ಯೋಗೀಶ್ವರ್ ಹೇಳಿದ್ದಾರೆ.
ಎರಡು ದಿನಗಳಿಂದ ಚನ್ನಪಟ್ಟಣದಲ್ಲಿಯೇ ಇದ್ದೆ. ಮೈಸೂರಿಗೆ ಹೋಗಿದ್ದಾಗ ಸುತ್ತೂರು ಮಠಕ್ಕೆ ಹೋಗಿದ್ದೆ. ಈಗ ಇಲ್ಲಿ ಸ್ವಾಮೀಜಿ ಆರ್ಶಿವಾದ ಪಡೆಯಲು ಬಂದಿದ್ದೆ ಅಷ್ಟೆ ಎಂದು ನಿರ್ಮಲಾನಂದ ಸ್ವಾಮೀಜಿ ಭೇಟಿ ಬಳಿಕ ಸುದ್ದಿಗಾಗರರಿಗೆ ಪ್ರತಿಕ್ರಿಯಿಸಿದರು.
ಇನ್ನೂ ಕೆಲ ಸ್ವಾಮೀಜಿಗಳನ್ನು ಭೇಟಿಯಾಗಲಿದ್ದೇನೆ ಎಂದು ಅವರು ಇದೇ ವೇಳೆ ಹೇಳಿದರು.
ಮೆಗಾ ಸಿಟಿ ಬಗ್ಗೆ ತನಿಖೆಯಾಗಲಿ. ಹಿಂದೆ ಎಚ್ಡಿಕೆ, ಡಿಕೆ ಕೂಡ ಮಾಡಿಸಿದ್ದರು. ನ್ಯಾಯಾಲಯವು ಕ್ಲಿಯರ್ ಮಾಡಿದೆ. ನನ್ನ ತಪ್ಪಿದ್ದರೆ ಶಿಕ್ಷೆ ಅನುಭವಿಸುವೆ ಎಂದರು.




