ಜಿಲ್ಲಾ ಸುದ್ದಿ
ಪಿಯುಸಿ, ಎಸೆಸೆಲ್ಸಿ ಪರೀಕ್ಷೆ ರದ್ದು ಮಾಡಲು ವಾಟಾಳ್ ನಾಗರಾಜ್ ಒತ್ತಾಯ

ರಾಮನಗರ: ರಾಜ್ಯದಲ್ಲಿ ಪಿಯುಸಿ ಹಾಗೂ ಎಸ್.ಎಸ್.ಎಲ್.ಸಿ ಪರೀಕ್ಷೆಗಳನ್ನು ರದ್ದು ಮಾಡಬೇಕು. ಪರೀಕ್ಷೆಗಳಿಲ್ಲದೆ ವಿದ್ಯಾರ್ಥಿಗಳನ್ನು ಪಾಸ್ ಮಾಡಬೇಕು ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಒತ್ತಾಯಿಸಿದ್ದಾರೆ.
ವಿದ್ಯಾರ್ಥಿಗಳ ಜತೆಗೆ ಸಚಿವ ಸುರೇಶ್ ಕುಮಾರ್ ಆಟವಾಡಬಾರದು. 12 ತಿಂಗಳಲ್ಲಿ ಕೇವಲ 2 ತಿಂಗಳು ಆನ್ ಲೈನ್ ಕ್ಲಾಸ್ ಮಾಡಿ ಪರೀಕ್ಷೆ ಬರೆಯಿರಿ ಅಂದ್ರೆ ಹೇಗೆ ಎಂದು ಪ್ರಶ್ನಿಸಿರುವ ಅವರು, ಜೂ.1 ರಂದು ರಾಜ್ಯ ಪಿಯುಸಿ ಹಾಗೂ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ಮನೆಯಲ್ಲಿಯೇ ಅರ್ಧ ತಾಸು ಸತ್ಯಾಗ್ರಹ ಮಾಡಬೇಕೆಂದು ವಿದ್ಯಾರ್ಥಿಗಳಲ್ಲಿ ಮನವಿ ಮಾಡಿದ್ದಾರೆ.
ಒಂದು ವೇಳೆ ಪರೀಕ್ಷೆ ರದ್ದು ಮಾಡದಿದ್ದಲ್ಲಿ ಉಗ್ರ ಚಳುವಳಿ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.




