Latestಉತ್ತರ ಕನ್ನಡಜಿಲ್ಲಾ ಸುದ್ದಿ

ಗ್ರಾಮಗಳ ಅಭಿವೃದ್ಧಿ ನನ್ನ ಗುರಿ : ಕಾರವಾರ ಶಾಸಕಿ ರೂಪಾಲಿ ನಾಯ್ಕ

ಕಾರವಾರ : ನಾನು ಗ್ರಾಮಗಳ‌ ಅಭಿವೃದ್ಧಿಗಾಗಿ ಇರುವ ಜನ ಸೇವಕಿ, ಜನಸೇವೆಗೆ ನಾನು ಸದಾ ಸಿದ್ಧಳಾಗಿದ್ದೇನೆ. ಗ್ರಾಮಗಳ ಅಭಿವೃದ್ಧಿಯ ಮೂಲಕ ಯುವ ಜನತೆಯ ಚಿತ್ತ ಗ್ರಾಮಗಳತ್ತ ಹೊರಳುವಂತೆ ಮಾಡಬೇಕಾಗಿದೆ. ಅದಕ್ಕಾಗಿ ರಸ್ತೆಗಳ ಅಭಿವೃದ್ಧಿ ನಡೆಯುತ್ತಿದೆ ಎಂದು ಶಾಸಕಿ ರೂಪಾಲಿ ನಾಯ್ಕ ಹೇಳಿದರು.

ಕಾರವಾರ ತಾಲೂಕಿನ ಅಸ್ನೋಟಿ, ಹಣಕೋಣ, ಘಾಡಸಾಯಿ ಹಾಗೂ ಚೆಂಡಿಯಾ ಗ್ರಾಮಗಳಲ್ಲಿ ವಿವಿಧ ರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದ ಅವರು, ಅಸ್ನೋಟಿ ಗ್ರಾಮ ಪಂಚಾಯತಿ ಹೊಸಾಳಿ ಮಾರಿಂಗಣಿ ತೊರ್ಲೆಬಾಗ್‌ ರಸ್ತೆ ನಿರ್ಮಾಣ ಅಂದಾಜು ಮೊತ್ತ 60 ಲಕ್ಷ ರೂ‌.ಕಾಮಗಾರಿ, ಅಸ್ನೋಟಿ ಗ್ರಾಮ ಪಂಚಾಯತಿ ಅರಗಾದಿಂದ ಪಂಟಲಬಾಗ್‌ ರಸ್ತೆ ಅಂದಾಜು ಮೊತ್ತ 60 ಲಕ್ಷ ರೂ‌. ನಿರ್ಮಾಣ ಕಾಮಗಾರಿ, ಅಸ್ನೋಟಿ ಮುಖ್ಯ ರಸ್ತೆಯಿಂದ ಕಾಮಾಕ್ಷಿ ದೇವಸ್ಥಾನಕ್ಕೆ ಹೋಗುವ ರಸ್ತೆ ಅಂದಾಜು ಮೊತ್ತ 55 ಲಕ್ಷ ರೂ‌.ರಸ್ತೆ ನಿರ್ಮಾಣ ಕಾಮಗಾರಿ, ಹಣಕೋಣ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೊಟೆಗಾಳಿ ಬಂದರ ರಸ್ತೆ ಅಂದಾಜು ಮೊತ್ತ 125 ಲಕ್ಷ ರೂ‌. ನಿರ್ಮಾಣ ಕಾಮಗಾರಿ, ಹಣಕೋಣ ಗ್ರಾಮ ಪಂಚಾಯತ್ ಸಾತೇರಿ ದೇವಸ್ಥಾನ ರಸ್ತೆ ಅಂದಾಜು ಮೊತ್ತ 150 ಲಕ್ಷ ರೂ‌. ರಸ್ತೆ ನಿರ್ಮಾಣ ಕಾಮಗಾರಿ, ಹಣಕೋಣ ಸಕಲವಾಡ ರಸ್ತೆ ಅಂದಾಜು ಮೊತ್ತ 55 ಲಕ್ಷ ರೂ.ನಿರ್ಮಾಣ ಕಾಮಗಾರಿ, ಘಾಡಸಾಯಿ ಗ್ರಾಮ ಪಂಚಾಯತಿಯ ಹಳಗೆಜೂಗ ರಸ್ತೆಯ ಅಂದಾಜು ಮೊತ್ತ 55 ಲಕ್ಷ ರೂ‌.ನಿರ್ಮಾಣ ಕಾಮಗಾರಿ,ಘಾಡಸಾಯಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಘಾಡಸಾಯಿ ಪರತಾಳೆ ರಸ್ತೆಯ ಅಂದಾಜು ಮೊತ್ತ 55 ಲಕ್ಷ ರೂ‌.ನಿರ್ಮಾಣ ಕಾಮಗಾರಿ, ಘಾಡಸಾಯಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಂಬ್ರಾಯಿ ಉಳಗಾ ಕಾತ್ನೆಡೋಲ್ ರಸ್ತೆ ಅಂದಾಜು ಮೊತ್ತ 200 ಲಕ್ಷ ರೂ‌.ಕಾಮಗಾರಿ, ಚೆಂಡಿಯಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಚೆಂಡಿಯಾ ರಸ್ತೆ ಅಂದಾಜು ಮೊತ್ತ 80 ಲಕ್ಷ ರೂ‌.ನಿರ್ಮಾಣ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದರು.

ನಮ್ಮಲ್ಲಿಯ ಯುವ ಜನತೆ ಉದ್ಯೋಗಕ್ಕಾಗಿ ಬೇರೆ ಬೇರೆ ಕಡೆ ವಲಸೆ ಹೋಗುತ್ತಾರೆ. ಇದರಿಂದ ಹಳ್ಳಿಗಳು ವೃದ್ಧಾಶ್ರಮಗಳಾಗುತ್ತಿವೆ. ಹೀಗಾಗಿ ಹಿರಿಯರು ಸಂಚಾರಕ್ಕೂ ತೊಂದರೆ ಅನುಭವಿಸುತ್ತಿದ್ದಾರೆ. ಈ ಹಿಂದೆ ಹಲವು ಗ್ರಾಮಗಳು ರಸ್ತೆಯಿಂದ ವಂಚಿತವಾಗಿದ್ದವು. ತಮ್ಮ ಅವಧಿಯಲ್ಲಿ ಹಲವೆಡೆ ಮೊದಲ ಬಾರಿ ರಸ್ತೆಯನ್ನು ಮಾಡಲಾಗಿದೆ. ಗ್ರಾಮಗಳ ಅಭಿವೃದ್ಧಿಗೆ ಶಕ್ತಿಮೀರಿ ಪ್ರಯತ್ನಿಸುವುದಾಗಿ ರೂಪಾಲಿ ನಾಯ್ಕ ಅವರು ಹೇಳಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ, ಭಾರತೀಯ ಜನತಾ ಪಕ್ಷದ ಕಾರವಾರ ಗ್ರಾಮೀಣ ಮಂಡಲ ಅಧ್ಯಕ್ಷರಾದ ಸುಭಾಷ್ ಗುನಗಿ, ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು

Spread the love

Related Articles

Leave a Reply

Your email address will not be published. Required fields are marked *

Back to top button