ಉತ್ತರ ಕನ್ನಡಜಿಲ್ಲಾ ಸುದ್ದಿ

ಉತ್ತರ ಕನ್ನಡ: ಯುವಕ ನಾಪತ್ತೆ: ದೂರು ದಾಖಲು

ಕಾರವಾರ : ತಾನು ಪ್ರೀತಿಸಿದ ಯುವತಿಗೆ ಬೇರೆ ಯುವಕನೊಂದಿಗೆ ಮದುವೆ ನಿಶ್ಚಯವಾದ ಹಿನ್ನೆಲೆಯಲ್ಲಿ ಯುವಕನೋರ್ವ ಮನೆಯಿಂದ ನಾಪತ್ತೆಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಹುಕ್ಕಳ್ಳಿ ಸಮೀಪದ ಹೊನ್ನೇಕೊಪ್ಪದಲ್ಲಿ ನಡೆದಿದೆ.

25 ವರ್ಷದ ಪ್ರಶಾಂತ್ ಗಣಪತಿ ಗೌಡ ಎನ್ನುವ ಯುವಕನೇ ನಾಪತ್ತೆಯಾದ ಯುವಕನಾಗಿದ್ದಾನೆ.ಈತ ತನ್ನ ಹಳೆಯ CD100 ಬೈಕ್ ನಲ್ಲಿ ಮನೆ ಬಿಟ್ಟು ಹೋಗಿದ್ದು,ಮನೆಯಿಂದ ಹೋಗುವಾಗ ನೀಲಿ ಚೌಕುಳಿಯ ಫುಲ್ ಶರ್ಟ್, ಕಪ್ಪು ಪ್ಯಾಂಟ್ ಧರಿಸಿದ್ದಾನೆ. ಐದು ಅಡಿ ಎತ್ತರ,ಸಾದಾ ಮೈಕಟ್ಟು,ಕಪ್ಪು ಬಣ್ಣ, ದುಂಡುಮುಖ ಹೊಂದಿದ್ದಾನೆ. ಈತನ ಸುಳಿವು ಸಿಕ್ಕಲ್ಲಿ ಕೂಡಲೇ ಸಿದ್ದಾಪುರ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಂಪರ್ಕ ಸಂಖ್ಯೆ 08389 – 230283 ಕ್ಕೆ ಮಾಹಿತಿ ನೀಡುವಂತೆ ಕೋರಿದ್ದಾರೆ.ಈ ಕುರಿತು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Spread the love

Related Articles

Leave a Reply

Your email address will not be published. Required fields are marked *

Back to top button