ಕೊಡಗುಜಿಲ್ಲಾ ಸುದ್ದಿ
ಕೊಡವ ಅಭಿವೃದ್ಧಿ ನಿಗಮ ಸ್ಥಾಪನೆಗೆ ಸರ್ಕಾರಕ್ಕೆ ಶಿಫಾರಸ್ಸು ಮಾಡುವಂತೆ ಸಂಸದ ಪ್ರತಾಪ್ ಸಂಹ ಅವರಿಗೆ ಮನವಿ

ಕೊಡಗು: ಯುನೈಟೆಡ್ ಕೊಡವ ಆರ್ಗನೈಸೇಷನ್ ಸಂಘಟನೆ ವತಿಯಿಂದ ಕೊಡವ ಅಭಿವೃದ್ಧಿ ನಿಗಮ ಸ್ಥಾಪನೆಗೆ ಸರಕಾರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಸಂಸದ ಪ್ರತಾಪ್ ಸಿಂಹ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತು.
ಯುಕೊ ಅಧ್ಯಕ್ಷ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ನೇತೃತ್ವದಲ್ಲಿ 36 ಮಂದಿಯ ನಿಯೋಗ ಮೈಸೂರಿನಲ್ಲಿ ಸಂಸದರನ್ನು ಭೇಟಿಯಾಗಿ ನಿಗಮ ಸ್ಥಾಪನೆಯ ಕುರಿತು ಚರ್ಚಿಸಿತು.
ಪಾರ್ಸಿ ಜನಾಂಗದ ರಕ್ಷಣೆಗೆ ಕೇಂದ್ರದಿಂದ ಸ್ಥಾಪನೆಯಾಗಿರುವ “ಜಿಯೊ ಪಾರ್ಸಿ” ಯೋಜನೆಯಂತೆ ಕೊಡವರಿಗೂ “ಕೊಡವ ಬಾಳೊ ಯೋಜನೆ ತರಲು ಚಿಂತನೆ ನಡೆದಿದೆ. ಕೊಡವ ಅಭಿವೃದ್ಧಿ ನಿಗಮ ಸ್ಥಾಪನೆಯಿಂದ ಕೊಡವರ ಇತರ ಬೇಡಿಕೆಗಳಿಗೆ ಅಡ್ಡಿಯಾಗುವುದಿಲ್ಲ ಎಂದು ಸಂಸದರು ಸ್ಪಷ್ಟಪಡಿಸಿದ್ದಾರೆ.
ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಬೇಡಿಕೆ ಕುರಿತು ಚರ್ಚಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಮಂಜು ಚಿಣ್ಣಪ್ಪ ತಿಳಿಸಿದರು.




