ಉಡುಪಿಕೃಷಿ

ಉಡುಪಿ ಡಿಎಚ್ಒ ನಾಗಭೂಷಣ್ ಕೃಷಿಯತ್ತ ಒಲವು; ಸಾರ್ವಜನಿಕರ ಮೆಚ್ಚುಗೆ

ಉಡುಪಿ: ಉಡುಪಿ ವಿಧಾನಸಭಾ ಕ್ಷೇತ್ರದ ಹಡಿಲು ಭೂಮಿಯಲ್ಲಿ ಭತ್ತದ ಬೇಸಾಯ ಮಾಡುವ ಕೃಷಿ ಕ್ರಾಂತಿ ನಡೆಯುತ್ತಿದ್ರೆ, ಇತ್ತ ಜಿಲ್ಲಾ ಆರೋಗ್ಯ, ಕುಟುಂಬ ಕಲ್ಯಾಣಾಕಾರಿಗಳ ಕೃಷಿ ಪ್ರೀತಿ ಬಾರೀ ಮೆಚ್ಚುಗೆ ಪಾತ್ರವಾಗಿದೆ.

ಸರ್ಕಾರಿ ಹುದ್ದೆ ಇದ್ರೂ, ಕೃಷಿ ಭತ್ತವ ವ್ಯವಸಾಯದ ಮೇಲಿನ ಪ್ರೀತಿಯಿಂದ ಉಡುಪಿ DHO ಡಾ.ನಾಗಭೂಷಣ್ ಅವರು ಕೃಷಿಯಲ್ಲಿ ಖುಷಿ ಕಂಡುಕೊಂಡಿದ್ದಾರೆ. ಉಡುಪಿ ಸಿದ್ದಾಪುರದಲ್ಲಿ ಹಿರಿಯರಿಂದ ಬಂದ ಸುಮಾರು ಎಂಟು ಎಕರೆ ಕೃಷಿ ಇದ್ದು, ಅದರಲ್ಲಿ ಆರು ಎಕರೆ ಜಾಗದಲ್ಲಿ ನಾಗಭೂಷಣ್ ಉಡುಪ ಅವರು ಭತ್ತ ಬೆಳೆಯುತ್ತಿದ್ದಾರೆ.

ಬೆಳಗ್ಗೆ 5.3O ರಿಂದ 8.30 ವರೆಗೂ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡು, ರಜಾ ದಿನಗಳಲ್ಲಿ ದಿನ ಪೂರ್ತಿ ಕೃಷಿಯಲ್ಲಿ ತೊಡಗಿಸಿಕೊಳ್ಳುತ್ತಾರೆ. ನಾಗಭೂಷಣ್ ಅವರೇ ಸ್ವಂತ ಟಿಲ್ಲರ್ ಮೂಲಕ ಗದ್ದೆ ಹದ ಮಾಡುತ್ತಾರೆ. ಡ್ರಮ್ ಸೀಡರ್ ಮೂಲಕ ನಾಟಿ ಮಾಡುತ್ತಾರೆ. ನನ್ನ ವೃತ್ತಿ ವೈದ್ಯಕೀಯ ಆದ್ರೂ ನನ್ನ ಆಯ್ಕೆ ಕೃಷಿ. ಕೃಷಿಯಲ್ಲಿ ಖುಷಿ ಇದೆ. ಲಾಭವೇನೂ ಅಷ್ಟು ಇಲ್ಲದೇ ಇದ್ರೂ ನಷ್ಟವೂ ಆಗುದಿಲ್ಲ ಅಂತಾರೆ ಡಾ. ನಾಗಭೂಷಣ್ ಉಡುಪರು.

Spread the love

Related Articles

Leave a Reply

Your email address will not be published. Required fields are marked *

Back to top button