ಕಲಬುರ್ಗಿಜಿಲ್ಲಾ ಸುದ್ದಿ
ಚೌಕ್ ಠಾಣೆ ಪೊಲೀಸರ ಕಾರ್ಯಚರಣೆ: ಕುಖ್ಯಾತ ಬೈಕ್ ಕಳ್ಳರಿಬ್ಬರ ಬಂಧನ

ಕಲಬುರ್ಗಿ: ಇಬ್ಬರು ಕುಖ್ಯಾತ ಬೈಕ್ ಕಳ್ಳರನ್ನು ಬಂಧಿಸಿದ ಚೌಕ್ ಠಾಣೆ ಪೊಲೀಸರು, 24 ಬೈಕ್ ಗಳನ್ನು ವಶಕ್ಕೆ ಪಡೆದಿದ್ದಾರೆ. ಇಸ್ಮಾಯಿಲ್ ತರಕಾರಿವಾಲೆ (26), ಅಬ್ದುಲ್ ಗಫಾರ್ (22) ಬಂಧಿತ ಆರೋಪಿಗಳು.
ಬಂಧಿತರಿಂದ 12 ಲಕ್ಷ ರೂ ಮೌಲ್ಯದ 24 ಬೈಕ್‌ಗಳು ಪೊಲೀಸರು ಜಪ್ತಿ ಮಾಡಿದ್ದಾರೆ. ಸುಪರ್ ಮಾರ್ಕೇಟ್ ಸೇರಿ ಹಲವು ಬಡಾವಣೆಗಳಲ್ಲಿ ಮನೆಗಳ ಮುಂದೆ ನಿಲ್ಲಿಸಿದ ಬೈಕ್‌ಗಳನ್ನ ಕಳ್ಳತನ ಮಾಡ್ತಿದ್ದ ಖದೀಮರು, ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದರು.
ಸೈಯದ್ ಚಿಂಚೋಳಿ ಬಳಿ ಸಂಶಯಾಸ್ಪದ ರೀತಿಯಲ್ಲಿ ಒಡಾಡುತ್ತಿದ್ದಾಗ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಈ ಕುರಿತಾಗಿ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ




