ಜಿಲ್ಲಾ ಸುದ್ದಿಬಾಗಲಕೋಟೆ
ಬಿಪಿನ್ ರಾವತ್ ಅಗಲಿಕೆ- ತನ್ನ ರಕ್ತದಿಂದಲೇ ಭಾವಚಿತ್ರ ಬಿಡಿಸಿ ಚಿತ್ರಕಲಾ ಶಿಕ್ಷಕ ಶ್ರದ್ಧಾಂಜಲಿ

ಬಾಗಲಕೋಟೆ: ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಸಾವನ್ನಪ್ಪಿರುವ ಮೂರು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಭಾವಚಿತ್ರವನ್ನು ತನ್ನ ರಕ್ತದಿಂದಲೇ ಚಿತ್ರಕಲಾ ಶಿಕ್ಷಕ ಬಿಡಿಸಿ ಶ್ರದ್ದಾಂಜಲಿ ಸಲ್ಲಿಸಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿರುವ ಚಿತ್ರಕಲಾ ಶಿಕ್ಷಕ ಸಂಗಮೇಶ ಬಗಲಿ ಬಿಪಿನ್ ರಾವತ್ ಅಗಲಿಕೆಗೆ ವಿಶಿಷ್ಟವಾಗಿ ಗೌರವ ಸಲ್ಲಿಸಿದ್ದಾರೆ.ಸಧ್ಯ ಸಂಗಮೇಶ ಬಗಲಿ ರಬಕವಿ ಬನಹಟ್ಟಿ ತಾಲೂಕಿನ ಹೊಸೂರು ಆರ್ ಎಮ್ ಎಸ್ ಎ ಹೈಸ್ಕೂಲ್ ನ ಚಿತ್ರಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಸಂಗಮೇಶ್ ಬಗಲಿ ಈ ಹಿಂದೆಯೂ ಗಣ್ಯರ ಅಗಲಿಕೆಗೆ ತಮ್ಮ ರಕ್ತದಿಂದಲೇ ಚಿತ್ರ ಬಿಡಿಸಿ ಗೌರವ ಸಲ್ಲಿಸಿದ್ದಾರೆ.ಇನ್ನು ನೂರಾರು ಚಿತ್ರಗಳನ್ನು ಬಿಡಿಸಿ ದಾಖಲೆ ಬರೆದಿದ್ದಾರೆ.




