Breaking NewsLatestಜಿಲ್ಲಾ ಸುದ್ದಿಮೈಸೂರುರಾಜ್ಯಸುದ್ದಿ

ಬೆಂ-ಮೈಸೂರು ರಸ್ತೆ ಸಂಚಾರ ಬಂದ್‌

ಮೈಸೂರು : ವೀಕೆಂಡ್‌ಗಾಗಿ ಮೈಸೂರು ಕಡೆ ಹೋಗೋರು ಗಮನಿಸಿಲೇ ಬೇಕಾದ ಸುದ್ದಿ ಇದಾಗಿದೆ. ನಿನ್ನೆ ರಾತ್ರಿ ಸುರಿದ ಭಾರೀ ಮಳೆಗೆ ಮಂಡ್ಯ ದ ಬೂದನೂರು ಕೆರೆ ಒಡೆದು ಅವಾಂತರ ಸೃಷ್ಟಿಸಿದೆ. ರಾಷ್ಟೀಯ ಹೆದ್ದಾರಿಗೆ ನೀರು ನುಗ್ಗಿರೋದ್ರಿಂದ ಬೆಂಗಳೂರು- ಮೈಸೂರು ರಸ್ತೆಯಲ್ಲಿ ವಾಹನ ಸಂಚಾರ ಏರುಪೇರಾಗಿದೆ.

ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಮಾಡುತ್ತಿರುವ ಹಿನ್ನೆಲೆ ಮಂಡ್ಯ ದ ಬೂದನೂರು ಕೆರೆ ಒಡೆದು ಹೋಗಿದೆ. ಹೀಗಾಗಿ ವಾಹನ ಸವಾರರು ಪರ್ಯಾಯ ಮಾರ್ಗದ ಮೂಲಕ ಸಂಚಾರ ಮಾಡಬೇಕಾಗಿದೆ. ಇಲ್ಲವಾದಲ್ಲಿ ವಾಹನ ಸವಾರರು ಮಾರ್ಗದಲ್ಲಿ ಹರಸಾಹಸ ಪಡಬೇಕಾಗಿದೆ ಸುಮಾರು 2 ಕಿ.ಲೋ ಮೀಟರ್‌ ವರಗೆ ರಸ್ತೆ ತುಂಬೆಲ್ಲ ನೀರು ಹರಿಯುತ್ತಿದೆ.

ಬೆಂಗಳೂರು ಮೈಸೂರು ವಾಹನ ಸಂಚಾರಕೆ ಪರ್ಯಾಯ ಮಾರ್ಗ ಒದಗಿಸಲಾಗಿದೆ. ಮೈಸೂರಿಗೆ ಹೋಗುರು ಮದ್ದೂರು ಕೆ.ಎಂ ದೊಡ್ಡಿ ಮೂಲಕ ಮೈಸೂರಿಗೆ ತಲುಪಬಹುದು. ಮೈಸೂರಿನಿಂದ ಬೆಂಗಳೂರಿಗೆ ಬರೋರು ಮಳವಳ್ಳಿ ಮದ್ದೂರು ಮೂಲಕ ಬೆಂಗಳುರ ಪ್ರವೇಶಿಸಬೇಕು

Related Articles

Leave a Reply

Your email address will not be published. Required fields are marked *

Back to top button