ಜಿಲ್ಲಾ ಸುದ್ದಿವಿಜಯನಗರ

ವಿಜಯಪುರ: ಪಟ್ಟಣ ಪಂಚಾಯತ್​ ಮಾಜಿ ಸದಸ್ಯನ ಹತ್ಯೆ

ವಿಜಯಪುರ: ಪಟ್ಟಣ ಪಂಚಾಯತ ಮಾಜಿ ಸದಸ್ಯ ಪ್ರದೀಪ ಎಂಟಮಾನ (37 ವರ್ಷ) ಭೀಕರ ಹತ್ಯೆಯಾಗಿರುವ ಘಟನೆ ತಡರಾತ್ರಿ ಜಿಲ್ಲೆಯ ಆಲಮೇಲ ಪಟ್ಟಣದಲ್ಲಿ ನಡೆದಿದೆ.

ಶುಕ್ರವಾರ ಬೆಳಿಗ್ಗೆ ಒಂದು ಗಂಟೆ ಸುಮಾರಿಗೆ ಆಲಮೇಲ ಪಟ್ಟಣದ ಯುಕೆಪಿ ಕ್ಯಾಂಪ್ ಬಳಿಯ ಸರ್ಕಾರಿ ಶಾಲೆಯ ಆವರಣದಲ್ಲಿ ಪ್ರದೀಪ ಎಂಟಮಾನ‌ನನ್ನು ಹತ್ಯೆ ಮಾಡಲಾಗಿದೆ.

ರೌಡಿ ಶೀಟರ್ ಆಗಿದ್ದ ಪ್ರದೀಪ ಎಂಟಮಾನ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲು ಸ್ನೇಹಿತರೊಂದಿಗೆ ತೆರಳಿದ್ದ. ಇದೇ ವೇಳೆ ನಾಲ್ಕೈದು ದುಷ್ಕರ್ಮಿಗಳು ದಾಳಿ ಮಾಡಿದ್ದಾರೆ. ಬಡಿಗೆ, ಕಲ್ಲುಗಳಿಂದ ದಾಳಿ ನಡೆಸಿರುವ ಹಂತಕರು, ತಲೆಗೆ ಬಲವಾಗಿ ಹೊಡೆದಿರುವ ಕಾರಣ ಪ್ರದೀಪ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಸ್ಥಳಕ್ಕೆ ಆಲಮೇಲ ಪೊಲೀಸರ ಆಗಮಿಸಿದ್ದಾರೆ. ಈ ಸಂಬಂಧ ಆಲಮೇಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Spread the love

Related Articles

Leave a Reply

Your email address will not be published. Required fields are marked *

Back to top button