ತಳ್ಳುಗಾಡಿಯಲ್ಲಿ ಗಂಡನನ್ನು ಕೂರಿಸಿಕೊಂಡು ಆಸ್ಪತ್ರೆಗೆ ಕರೆದೊಯ್ದ ಮಹಿಳೆ

ಗದಗ: ಗಂಡನ ಚಿಕಿತ್ಸೆಗಾಗಿ ತಳ್ಳುವ ನೀರಿನ ಗಾಡಿಯ ಮೂಲಕ ಐದು ಕಿಲೋಮೀಟರ್ ಪತ್ನಿ ಪಾದಯಾತ್ರೆ ಮಾಡಿರುವ ಘಟನೆ ಗದಗ ನಗರದಲ್ಲಿ ನಡೆದಿದೆ.
ಗದಗ ನಗರದ ಸಿದ್ದರಾಮೇಶ್ವರ ನಗರದ ನಿವಾಸಿ ಗೋವಿಂದಪ್ಪ ಹಾಗೂ ಅವನ ಹೆಂಡತಿ ತಳುವ ನೀರಿನ ಗಾಡಿಯಲ್ಲಿ ಕೂರಿಸಿ ಚಿಕಿತ್ಸೆಗಾಗಿ ಜಿಮ್ಸ್ ಆಸ್ಪತ್ರೆಗೆ ಕರೆತಂದಿದ್ದಾಳೆ. ಸಿದ್ದರಾಮೇಶ್ವರ ನಗರದಿಂದ ಜಿಮ್ಸ್ ಆಸ್ಪತ್ರೆಗೆ ಸುಮಾರು ಐದು ಕಿಲೋಮೀಟರ್. ಅಲ್ಲಿಯವರಿಗೆ ಕರೆದುಕೊಂಡು ಹೋಗಿದ್ದಾಳೆ.
ರೋಗಿ ಗೋವಿಂದಪ್ಪನಿಗೆ ಗಂಡುಮಕ್ಕಳು ಇಲ್ಲ. ಹೀಗಾಗಿ ಅವನ ಪತ್ನಿ ಪಕ್ಕದ ಮನೆಯ ಹುಡುಗನೊಂದಿಗೆ ಆಸ್ಪತ್ರೆಗೆ ಬಂದಿದ್ದಾರೆ. ನೀರಿನ ಗಾಡಿ ತಳಲು ಸಹಾಯ ಮಾಡಲು ಬಾಲಕ ಅವರೊಂದಿಗೆ ಆಸ್ಪತ್ರೆಗೆ ಬಂದಿದ್ದಾನೆ.
ಗೋವಿಂದಪ್ಪ ಕಳೆದ ಎರಡು ತಿಂಗಳ ಹಿಂದೆ ಸಕ್ಕರೆ ಕಾಯಿಲೆಯಿಂದ ಒಂದು ಕಾಲ ಕಳೆದುಕೊಂಡಿದ್ದಾನೆ. ಜಿಮ್ಸ್ ಆಸ್ಪತ್ರೆಯ ವೈದ್ಯರಿಂದ ಆಪರೇಷನ್ ಮಾಡಿ ಕಾಲು ತೆಗೆದಿದ್ದಾರೆ. ಇಂದು ಮರಳಿ ಚಿಕಿತ್ಸೆಗೆಂದು ಜಿಮ್ಸ್ ಆಸ್ಪತ್ರೆಗೆ ಹೊರಟಿರುವ ವೇಳೆ ಖಾಸಗಿ ವಾಹನದ ಮೊರೆ ಹೋಗಿದ್ದಾರೆ ಅವರು 300-400 ರೂಪಾಯಿ ಕೇಳಿದ್ದಾರಂತೆ. ನಾವು ಬಡವರು ನಮ್ಮ ಹತ್ತಿರ ಹಣವಿಲ್ಲ. ಹೀಗಾಗಿ ತಳ್ಳುವ ನೀರಿನ ಗಾಡಿಯ ಮೂಲಕ ಆಸ್ಪತ್ರೆ ಹೊರಟ್ಟಿದೇವೆ ಎಂದು ಗೋಳಾಡುತ್ತಿದ್ದಾರೆ. ಯಾರಾದರೂ ಸಹಾಯ ಮಾಡಿ ಅಂತಾ ರೋಗಿ ಗೋವಿಂದಪ್ಪ ಕೈ ಮುಗಿದು ಕೇಳಿಕೊಂಡಿದ್ದಾನೆ.




