ಉತ್ತರ ಕನ್ನಡಜಿಲ್ಲಾ ಸುದ್ದಿ
ಮುರ್ಡೇಶ್ವರದಲ್ಲಿ ಸಮುದ್ರ ಪಾಲಾಗುತ್ತಿದ್ದ ಪ್ರವಾಸಿಗನ ರಕ್ಷಣೆ

ಕಾರವಾರ : ಸಮುದ್ರ ಪಾಲಾಗುತ್ತಿದ್ದ ಪ್ರವಾಸಿಗನನ್ನು ರಕ್ಷಣೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರ್ಡೇಶ್ವರ ಕಡಲ ತೀರದಲ್ಲಿ ಇಂದು ನಡೆದಿದೆ.
ಶಿರಸಿ ಮೂಲದ ಅಭಯ್ (35) ರಕ್ಷಣೆಗೊಂಡ ಪ್ರವಾಸಿಗನಾಗಿದ್ದು, ಇಂದು ಬೆಳಿಗ್ಗೆ ಶಿರಸಿಯಿಂದ ನಾಲ್ಕು ಜನರು ಮುರ್ಡೇಶ್ವರಕ್ಕೆ ಪ್ರವಾಸಕ್ಕೆ ಬಂದಿದ್ದರು.ಪ್ರವಾಸಕ್ಕೆ ಬಂದ ನಾಲ್ಕು ಜನರು ಸಮುದ್ರದಲ್ಲಿ ಇಳಿದಿದ್ದರು.
ಈ ವೇಳೆ ಶಿರಸಿಯ ಅಭಯ್ ಸಮುದ್ರದ ಅಲೆಗೆ ಸಿಲುಕಿ ಮುಳುಗಿದ್ದರು. ತಕ್ಷಣ ಗಮನಿಸಿದ ಮುರ್ಡೇಶ್ವರದ ಓಷಿಯನ್ ಅಡ್ವೆಂಚರ್ ಸಂಸ್ಥೆ ಯುವಕರು ರಕ್ಷಣೆ ಮಾಡಿದ್ದಾರೆ.




