ಕೋಲಾರಜಿಲ್ಲಾ ಸುದ್ದಿ
ಕೋಲಾರ: ಮೊದಲ ಬಾರಿಗೆ ಸರ್ವಕಾಲಿಕ ದಾಖಲೆ ಬರೆದ ಟೊಮೆಟೊ ಬೆಲೆ

ಕೋಲಾರ: ಏಷ್ಯಾ ಖಂಡದಲ್ಲಿಯೇ ಎರಡನೇ ಅತಿ ದೊಡ್ಡ ಟೊಮೆಟೊ ಮಾರುಕಟ್ಟೆಯಾದ ಕೋಲಾರ ಮಾರುಕಟ್ಟೆಯಲ್ಲಿ ಇಂದು ಪ್ರತಿ 15 ಕೆಜಿ ಟೊಮೆಟೊ ಬಾಕ್ಸ್ ನ ಬೆಲೆ 1400 ರೂ.ಗಳಿಗೆ ಮಾರಾಟ ಆಗುವ ಮೂಲಕ ಅತೀ ಹೆಚ್ಚಿನ ಬೆಲೆಗೆ ಟೊಮೆಟೊ ಮಾರಾಟವಾದ ದಾಖಲೆ ನಿರ್ಮಾಣವಾಗಿದೆ.
ಕಳೆದ ಒಂದು ವರ್ಷದಿಂದ ಸತತ ಟಮೋಟ ಬೆಲೆ ತೀವ್ರ ಕುಸಿತಗೊಂಡು ರೈತರು ತುಂಬಾ ನಷ್ಟ ಅನುಭವಿಸಿದ್ದರು ಆದರೆ ಕಳೆದ ಒಂದೂವರೆ ತಿಂಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಟಮೋಟ ಸೇರಿದಂತೆ ಎಲ್ಲಾ ತರಕಾರಿ ಬೆಳೆಗಳು ಮಳೆಗೆ ನಾಶವಾದ ಕಾರಣ ಮಾರುಕಟ್ಟೆಯಲ್ಲಿ ಟಮೋಟ ಬೆಲೆ ಗಗನಕ್ಕೇರಿದೆ.
ದೇಶದ ನಾನಾ ರಾಜ್ಯಗಳಿಂದ ವ್ಯಾಪಾರಸ್ಥರು ಕೋಲಾರದ ಟೊಮೆಟೊ ಮಾರುಕಟ್ಟೆಯಲ್ಲಿ ಮುಗಿಬಿದ್ದಿದ್ದಾರೆ ಆದರೆ ಇಲ್ಲಿಗೆ ಕೇವಲ ಬೆರಳೆಣಿಕೆಯಷ್ಟು ರೈತರು ಮಾತ್ರ ಟಮೋಟ ಉಳಿಸಿಕೊಂಡಿರುವ ಕಾರಣ ಲಭ್ಯವಿರುವ ಟಮೋಟ ಅತೀ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿದೆ.




