ಜೆಡಿಎಸ್ ಜೊತೆ ಮೈತ್ರಿ ಇಲ್ಲ, ಮುಸ್ಲಿಂ ನಾಯಕರನ್ನು ಸೃಷ್ಟಿಸುವುದೇ ನನ್ನ ಗುರಿ: ಅಸಾದುದ್ದೀನ್ ಓವೈಸಿ

ಬೆಳಗಾವಿ : ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಅಖಾಡ ರಂಗೇರುತ್ತ ಸಾಗುತ್ತಿದೆ, ಪಾಲಿಕೆ ಚುನಾವಣೆಯಲ್ಲಿ 6 ವಾರ್ಡ್ ಗಳಲ್ಲಿ ಸ್ಪರ್ಧೆ ಮಾಡುತ್ತಿರುವ AIMIM ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಇಂದು ಬೆಳಗಾವಿಯ ಆರು ವಾರ್ಡ್ ಗಳಲ್ಲಿ ಬಿರುಸಿನ ಚುನಾವಣಾ ಪ್ರಚಾರ ನಡೆಸಿದ್ದಾರೆ.
ಬೆಳಗಾವಿ ನಗರದ ಆರು ವಾರ್ಡ್ ನಲ್ಲಿ AIMIM ಪಕ್ಷ ಸ್ಪರ್ದಿಸುತ್ತಿದ್ದು ಮುಸ್ಲಿಂ ನಾಯಕರ ಸೃಷ್ಟಿಗೆ ಚುನಾವಣೆಯಲ್ಲಿ ಗೆಲ್ಲುವುದು ಅವಶ್ಯಕವಾಗಿದೆ, ಸದ್ಯ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲಾ, ಕುಮಾರಸ್ವಾಮಿ ಅವರು ಕಾಂಗ್ರೆಸನೊಂದಿಗೆ ಅನವಶ್ಯಕ ಮೈತ್ರಿ ಮಾಡಿಕೊಂಡಿದ್ದು ತಪ್ಪು ಎಂದು ಓವೈಸಿ ಹೇಳಿಕೆ ನೀಡಿದ್ದಾರೆ.
ನಗರದ ಇಫಾ ಹೋಟೆಲ್ ನಲ್ಲಿ ಪತ್ರಕರ್ತರೊಂದಿಗೆ ಸುದ್ದಿಗೋಷ್ಠಿ ನಡೆಸಿದ ಅಸಾವುದ್ದೀನ್ ಓವೈಸಿ ತಮ್ಮ ವಿಚಾರಧಾರೆಯನ್ನ ಪ್ರಚಾರದಲ್ಲಿ ಜನರಿಗೆ ತಿಳಿಸಿದ್ದು, ಕಾಂಗ್ರೆಸ್ ಪಕ್ಷ ಕೇವಲ ಮುಸ್ಲಿಂ ಜನರನ್ನ ಓಟ್ ಬ್ಯಾಂಕ್ ಆಗಿ ಮಾತ್ರ ಬಳಸಿಕೊಳ್ಳುತ್ತಿದ್ದು, ಯರೊಬ್ಬ ನಾಯಕನನ್ನು ಕೂಡ ಬೆಳಸಿಲ್ಲ. ಯಾವುದೇ ಒಂದು ಹಂತಕ್ಕೆ ಸೀಮಿತವಾಗದೆ ನಾವು ನಾಯಕರನ್ನ ಸೃಷ್ಟಿಸಬೇಕಿದೆ ಎಂದಿದ್ದಾರೆ.
ಬೆಳಗಾವಿ ನಗರದ ಅಭಿವೃದ್ಧಿ ಹಾಗೂ ಅಲ್ಪಸಂಖ್ಯಾತ ನಾಯಕರ ಸೃಷ್ಟಿ ವಿಷಯ ಇಟ್ಟುಕೊಂಡು ಚುನಾವಣೆ ಎದುರಿಸುತ್ತಿದ್ದೇವೆ. ಬಿಜಿಪಿ ಬಿ ಟೀಮ್ ಎನ್ನುವ ಸತೀಶ್ ಜಾರಕಿಹೊಳಿ ವಿಷಯಕ್ಕೆ ಪ್ರತಿಕ್ರಿಯೆ ನೀಡದೆ ಮಹಾರಾಷ್ಟ್ರದಲ್ಲಿ ಕಾಂಗ್ರೇಸ್ ನಿಲುವನ್ನ ಸ್ಪಷ್ಟ ಪಡಿಸುವಂತೆ ಹರಿಹಾಯ್ದರು.
