ಕಲಬುರ್ಗಿಜಿಲ್ಲಾ ಸುದ್ದಿ

ನೀರು ತರಲು ಹೋಗಿ ಬಾವಿಗೆ ಬಿದ್ದು ಶಿಕ್ಷಕ ಸಾವು

ಕಲಬುರಗಿ: ನೀರು ತರಲು ಹೋಗಿ ಆಯಾತಪ್ಪಿ ಬಾವಿಗೆ ಬಿದ್ದು ಶಿಕ್ಷಕ ಸಾವನ್ನಪ್ಪಿರುವ ಘಟನೆ ಅಫಜಲಪುರ ತಾಲೂಕು ತೆಲ್ಲೂರ್ ಗ್ರಾಮದಲ್ಲಿ ನಡೆದಿದೆ.

ಮಲ್ಲಣ್ಣ ಮಡಿವಾಳ (30) ಮೃತ ದುರ್ದೈವಿಯಾಗಿದ್ದಾನೆ. ತನ್ನದೆ ಹೊಲದಲ್ಲಿರುವ ಬಾವಿಯಲ್ಲಿ ನೀರು ತರಲು ಹೋದಾಗ ಮಲ್ಲಣ್ಣ ಕಾಲು ಜಾರಿ ಬಾವಿಯಲ್ಲಿ ಬಿದ್ದಿದ್ದಾರೆ. ದುರಾದೃಷ್ಟ ಇವರಿಗೆ ಈಜು ಕೂಡಾ ಬರತ್ತಿರಲಿಲ್ಲವಂತೆ, ಹೀಗಾಗಿ ಬಾವಿಯಲ್ಲಿಯೇ ಮುಳುಗಿ ಸಾವನ್ನಪ್ಪಿದ್ದಾರೆ.

ಖಾಸಗಿ ಶಾಲೆಯಲ್ಲಿ ಶಿಕ್ಷಕರಾಗಿದ್ದ ಮಲ್ಲಣ್ಣ, ಹೊಲದಲ್ಲಿರುವ ಕಡಲೆಗೆ ಕ್ರಿಮಿನಾಶಕ ಔಷಧಿ ಹೊಡೆಯೋದಕ್ಕೆ ನೀರು ತರಲು ಹೋಗಿದ್ದ ವೇಳೆ ದುರ್ಘಟನೆ ಸಂಭವಿಸಿದೆ.ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಈ ಘಟನೆ ಸಂಬಂಧಿಸಿ ಗಾಣಗಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Leave a Reply

Your email address will not be published. Required fields are marked *

Back to top button