ಉತ್ತರ ಕನ್ನಡಜಿಲ್ಲಾ ಸುದ್ದಿ
ಜಲಪಾತದಲ್ಲಿ ಕಾಲು ಜಾರಿ ಬಿದ್ದು ಯುವಕ ಸಾವು

ಕಾರವಾರ: ಜಲಪಾತದಲ್ಲಿ ಈಜಲು ಹೋದ ವಿದ್ಯಾರ್ಥಿ ನೀರು ಪಾಲಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಜಡ್ಡಿಗದ್ದೆ ಸಮೀಪದ ಶಿವಗಂಗಾ ಜಲಪಾತದಲ್ಲಿ ನಡೆದಿದೆ.
ಮುಂಡಗೋಡ ತಾಲೂಕಿನ ಚಿಪಗೇರಿಯ ಸುಬ್ರಹ್ಮಣ್ಯ ಹೆಗಡೆ ನೀರು ಪಾಲಾದ ವಿದ್ಯಾರ್ಥಿ. ಮೂರು ಜನ ವಿದ್ಯಾರ್ಥಿಗಳು ಶಿವಗಂಗಾ ಜಲಪಾತದ ಪ್ರವಾಸಕ್ಕೆಂದು ಮಂಗಳವಾರ ತೆರಳಿದ್ದಾರೆ. ಈ ವೇಳೆ ಗೆಳೆಯರ ಜೊತೆ ನೀರಿನಲ್ಲಿ ಆಟವಾಡುತ್ತಿದ್ದ ಸುಬ್ರಹ್ಮಣ್ಯ ಹೆಗಡೆ ಕಾಲುಜಾರಿ ಬಿದ್ದು ಮೃತಪಟ್ಟಿದ್ದಾರೆ.
ಸುಬ್ರಹ್ಮಣ್ಯ ಹೆಗಡೆ ಶವದ ಹುಡುಕಾಟ ನಡೆಯುತ್ತಿದ್ದು ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




