ಜಿಲ್ಲಾ ಸುದ್ದಿಬಾಗಲಕೋಟೆ
ಬೈಕ್ ಅಪಘಾತ: ಚಿಕಿತ್ಸೆ ಫಲಿಸದೇ ಬಾಗಲಕೋಟೆಯಲ್ಲಿ ಯೋಧ ಸಾವು

ಬಾಗಲಕೋಟೆ: ಬೈಕ್ ಡಿಕ್ಕಿ ಹೊಡೆದ ಪರಿಣಾಮ ಯೋಧನೊಬ್ಬ ಚಿಕಿತ್ಸೆ ಫಲಿಸದೇ ಬಾಗಲಕೋಟೆ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ನಡೆದಿದೆ.
ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಸೂಳಿಕೇರಿ ಗ್ರಾಮದ ಯೋಧ ಹನಮಂತ ಸಿದ್ರಾಮಪ್ಪ ಹಡಪದ(33) ಮೃತಪಟ್ಟ ದುರ್ದೈವಿ. ಈತ ಬಾದಾಮಿಯಿಂದ ಪಟ್ಟದಕಲ್ ಕಡೆಗೆ ಬೈಕ್ ನಲ್ಲಿ ಹೋಗುತ್ತಿದ್ದಾಗ ನಂದಿಕೇಶ್ವರ ಗ್ರಾಮದ ಹತ್ತಿರ ವೇಗವಾಗ ಪಲ್ಸರ್ ಬೈಕ್ ನಲ್ಲಿ ಬಂದ ಸವಾರ ಮಂಜುನಾಥ ಮಾಗುಂಡಪ್ಪ ಜತ್ತಿ ಕಳೆದ ಸೆ.8 ರಂದು ವೇಗವಾಗಿ ವಾಹನ ಚಲಾವಣೆ ಮಾಡಿ ಢಿಕ್ಕಿ ಹೊಡೆದ ಪರಿಣಾಮ ಸೈನಿಕ ಹನಮಂತ ಹಡಪದ ಇವನಿಗೆ ತಲೆಗೆ ತೀವ್ರ ಪೆಟ್ಟಾಗಿ ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ಮೃತಪಟ್ಟಿದ್ದು, ಈ ಕುರಿತು ಮೃತ ಸೈನಿಕನ ಹೆಂಡತಿ ಶಶಿಕಲಾ ಹಡಪದ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ ಎಂದು ಪಿ.ಎಸ್.ಐ.ನೇತ್ರಾವತಿ ಪಾಟೀಲ ತಿಳಿಸಿದ್ದಾರೆ.




