ಉಡುಪಿಜಿಲ್ಲಾ ಸುದ್ದಿ

ಅಪಘಾತದಲ್ಲಿ ಸಮಾಜ ಸೇವಕ ಅಶೋಕ್ ಶೆಟ್ಟಿ ನಿಧನ: ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ

ಉಡುಪಿ: ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಿನ್ನೆ ಬೆಳಗಿನ ಜಾವ ಕಂಟೈನರ್ ಲಾರಿಗೆ ಹಿಂಬದಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಛಾಯಾಗ್ರಹಕ, ಸಮಾಜ ಸೇವಕ ಹಾಗೂ ಪುತ್ರ ಮತ್ತು ಹಿಂಬದಿಯಲ್ಲಿ ಕುಳಿತಿದ್ದ ವ್ಯಕ್ತಿ ಗಂಭೀರ ಗಾಯಗೊಂಡಿದ್ದು, ನಿನ್ನೆ ಚಿಕಿತ್ಸೆ ಫಲಕಾರಿಯಾಗದೆ ಅಶೋಕ್ ಶೆಟ್ಟಿ ಮೃತಪಟ್ಟಿದ್ದರು. ಇಂದು ಅವರ ಅಂತ್ಯಕ್ರಿಯೆ ಬೈಂದೂರು ತಾಲೂಕಿನ ಸ್ವಗ್ರಾಮ ಯರಕೋಣೆಯಲ್ಲಿ ನಡೆಯಿತು.

ಉಡುಪಿ ಜಿಲ್ಲೆಯ ಸೌತ್ ಕೆನರಾ ಫೋಟೋಗ್ರಫಿ ಅಸೋಶಿಯೇಶನ್ ಮಾಜಿ ಮಾಜಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಅಶೋಕ್ ಶೆಟ್ಟಿಯವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಇಂದು ಬೆಳಿಗ್ಗೆ ಎಂಟು ಗಂಟೆಗಯಿಂದ 11 ಘಂಟೆಯ ತನಕ ಸ್ವಗೃಹದಲ್ಲಿ ಅವಕಾಶವನ್ನು ಕಲ್ಪಿಸಲಾಗಿದೆ.

ಬಿಜೆಪಿಯ ಹಿರಿಯ ನಾಯಕರು ಅಂತಿಮ ದರ್ಶನವನ್ನು ಪಡೆದರು. ಸಚಿವ ಕೋಟಾ ಶ್ರೀನಿವಾಸ್​ ಪೂಜಾರಿ, ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ ಸಹ ಗ್ರಹದಲ್ಲಿ ಅಶೋಕ್ ಶೆಟ್ಟಿಯವರ ಪಾರ್ಥಿವ ಶರೀರವನ್ನು ವೀಕ್ಷಿಸಿ ಭಾವುಕರಾದರು ಅಪಾರ ಪ್ರಮಾಣದ ಅಭಿಮಾನಿಗಳನ್ನು ಹೊಂದಿದ್ದ ಅಶೋಕ್ ಶೆಟ್ಟಿ ಫೋಟೋಗ್ರಾಫಿಯಲ್ಲಿ ತನ್ನದೇ ಆದ ಛಾಪನ್ನು ಜಿಲ್ಲೆಯಲ್ಲಿ ಮೂಡಿಸಿದ್ದರು.

ಅನೇಕ ಯುವ ಫೋಟೋಗ್ರಾಫರ್ ಗಳನ್ನು ಸೃಷ್ಟಿಸಿ ಸ್ವಂತ ಉದ್ಯೋಗದಲ್ಲಿ ತೊಡಗಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದಾರೆ. ಸಾವಿರಾರು ಜನ ಇಂದು ಅಶೋಕ್ ಶೆಟ್ಟಿಯವರ ಪ್ರಾರ್ಥಿವ ಶರೀರವನ್ನು ನೋಡಿ ಕಣ್ಣಂಚಿನಲ್ಲಿ ನೀರಿನ ಹನಿಗಳನ್ನು ಹಾಕಿ ಗೌರವ ಸಲ್ಲಿಸಿದರು.

Spread the love

Related Articles

Leave a Reply

Your email address will not be published. Required fields are marked *

Back to top button