ಉತ್ತರ ಕನ್ನಡಜಿಲ್ಲಾ ಸುದ್ದಿ
ಶಿರಸಿಯಲ್ಲಿ ಅಂಗಡಿಯ ಬೀಗ ಮುರಿದು ಕಳ್ಳತನ ಮಾಡಿದ್ದ ಆರೋಪಿಗಳ ಬಂಧನ

ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಕರಿಗುಂಡಿ ರಸ್ತೆಯಲ್ಲಿರುವ ರೇಣುಕಾ ಸ್ಟೀಲ್ ಮತ್ತು ಹಾರ್ಡವೇರ್ ಅಂಗಡಿಯ ಕಬ್ಬಿಣದ ಶೀಟ್ ಮುರಿದು 10 ಸಾವಿರ ರೂ.ನಗದು ಹಾಗೂ 15 ಸಾವಿರ ರೂ.ಬೆಲೆ ಬಾಳುವ ಹಾರ್ಡವೇರ್ ವಸ್ತುಗಳು ಕಳ್ಳತನ ಮಾಡಿದ್ದ ಆರೋಪಿಗಳನ್ನು ಶಿರಸಿ ಹೊಸ ಮಾರುಕಟ್ಟೆ ಠಾಣೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಫೈಜಾನ್ ಗಿಡ್ಡಾ ಫೈಜಾನ್ ರಾಮನಬೈಲ್ ಶಿರಸಿ, ಮೊಹಮದ್ ಜಾಹಿದ್ ಗೋಡಜಿಲ್ ತಂದೆ ಅಬೂಮೊಹಮದ್ ಶೇಖ್ ರಾಮನತಗ್ಗು ಎಂಬುವವರೇ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ ಕಳ್ಳತನ ಮಾಡಿದ ನಗದು ಹಾಗೂ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಶಿರಸಿ ಉಪವಿಭಾಗದ ಡಿವೈಎಸ್ಪಿ ರವಿ ಡಿ.ನಾಯ್ಕ, ಸಿಪಿಐ ರಾಮಚಂದ್ರ ನಾಯಕ ಅವರ ಮಾರ್ಗದರ್ಶನದಲ್ಲಿ ನಗರ ಠಾಣೆ ಪಿಎಸ್ಐ ರಾಜಕುಮಾರ್ ಉಕ್ಕಲಿ, ನ್ಯೂ ಮಾರ್ಕೆಟ್ ಎಎಸ್ಐ ಶಿವಕುಮಾರ ಪೂಜಾರ್ ಹಾಗೂ ಸಿಬ್ಬಂದಿಗಳಾದ ಇಸ್ಮಾಯಿಲ್ ಕೋಣನಕೇರಿ, ರಾಮಯ್ಯ ಪೂಜಾರಿ, ಕೋಟೇಶ ನಾಗರವಳ್ಳಿ,ಮಹಾಂತೇಶ್ ಬಾರಕೇರ, ಹನುಮಂತ ಮಾಕಾಪುರ ಅವರು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.




