ಜಿಲ್ಲಾ ಸುದ್ದಿಹುಬ್ಬಳ್ಳಿ - ಧಾರವಾಡ

Sangamesh Handagi: ಹಿರಿಯ ಸಾಹಿತಿ ಡಾ‌.ಸಂಗಮೇಶ ಹಂಡಗಿ ನಿಧನ

ಧಾರವಾಡ: ವಿಮರ್ಶಾತ್ಮಕ ಬರಹ, ವಚನ, ಕಾವ್ಯ ಹಾಗೂ ಕನ್ನಡ ಸಾಹಿತ್ಯದಿಂದ ಪ್ರಖ್ಯಾತರಾಗಿದ್ದ ಹಿರಿಯ ಸಾಹಿತಿ ಡಾ. ಸಂಗಮೇಶ ಹಂಡಿಗಿ (84) ವಿಧಿವಶರಾಗಿದ್ದಾರೆ. ಮೂಲತಃ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ತೆಲಗಿಯವರಾದ ಹಂಡಗಿಯವರು ಕನ್ನಡ ಸಾಹಿತ್ಯ ಲೋಕಕ್ಕೆ 46 ಗ್ರಂಥಗಳ ಕಾಣಿಕೆ ನೀಡಿದ್ದಾರೆ. ಡಾ. ಹಂಡಿಗಿಯವರು ಪತ್ನಿ, ಪತ್ರಕರ್ತ ಡಾ. ವೀರೇಶ ಹಂಡಿಗಿ ಸೇರಿದಂತೆ ಇಬ್ಬರು ಪುತ್ರರು, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು-ಬಳಗ ಅಗಲಿದ್ದಾರೆ.

ಹುಬ್ಬಳ್ಳಿಯ ಅಕ್ಷಯ ಕಾಲನಿ ಗೋಕುಲ ರಸ್ತೆಯ “ಬಸವ ಬನಸಿರಿ” ನಿವಾಸದಲ್ಲಿ ಹಿರಿಯರ ಅಂತಿಮ ದರ್ಶನಕ್ಕೆ ಅವಕಾಶ ಮಾಡಲಾಗಿದೆ. ಇನ್ನೂ ನವಲಗುಂದದ ಶ್ರೀ ಶಂಕರ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ, ಕನ್ನಡ ವಿಭಾಗ ಮುಖ್ಯಸ್ಥರಾಗಿ ಕಾಲು ಶತಮಾನ ಸೇವೆ ಸಲ್ಲಿಸಿ, ನಿವೃತ್ತರಾಗಿ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಕೆಲಕಾಲ ಸಂದರ್ಶಕ ಪ್ರಾಧ್ಯಾಪಕರಾಗಿ ಪಿಎಚ್.ಡಿ ಅಧ್ಯಯನ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ್ದರು.

ವಿಮರ್ಶಾತ್ಮಕ ಪ್ರಬಂಧಗಳಾದ ಭಕ್ತಿ, ಭಕ್ತಿಮಾರ್ಗ, ಜನಪದ ಸಾಹಿತ್ಯ ಮತ್ತು ದೈವಿ ಶ್ರದ್ಧೆ, ದಶಧರ್ಮ, ಸಂಸ್ಕೃತಿ ಸೌರಭ, ನುಡಿ-ಮಿಡಿ, ಶರಣಾನುಭವ, ವಚನಸ್ತವನ, ವಚನಮಯೂರ, ಮುಂತಾದ ವಚನಗಳು. ಕಾವ್ಯಸಂಗಮ, ಕಾವ್ಯಗೌರವ, ನೆನೆದವರ ಮನದಲ್ಲಿ, ಸೇರಿದಂತೆ ಅನೇಕ ಜೀವನ ಚರಿತ್ರೆಗಳನ್ನು ಅವರು ಬರೆದಿದ್ದಾರೆ.

ಕನ್ನಡ ನಾಡಿನ ಪ್ರಮುಖ ಪತ್ರಿಕೆಗಳಿಗೆ ವರದಿಗಾರ, ಮಾಮಿಡಿ ಪತ್ರಿಕೆಯ ಸಂಸ್ಥಾಪಕ ಸಂಪಾದಕರಾಗಿ ಪತ್ರಿಕಾರಂಗದಲ್ಲೂ ಪರಿಣಿತಿ ಹೊಂದಿರುವ ಇವರು 2006ರಲ್ಲಿ ಸಕಲೇಶಪುರದಲ್ಲಿ ಜರುಗಿದ ಅಖಿಲ ಕರ್ನಾಟಕ 2ನೇ ವಚನ ಸಾಹಿತ್ಯ ಸಮ್ಮೇಳನದಲ್ಲಿ ವಚನಶ್ರೀ ಪ್ರಶಸ್ತಿಗೆ ಭಾಜನರಾಗಿದ್ದರು.

1994ರಲ್ಲಿ ಬಸವನ ಬಾಗೇವಾಡಿ ತಾಲೂಕಾ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರಲ್ಲೇ 1999ರಲ್ಲಿ ವಿಜಯಪುರ ತಾಲೂಕ ಪ್ರಥಮ ಶರಣ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಇಂದು ಸಂಜೆ ವಿದ್ಯಾನಗರದ ರುದ್ರಭೂಮಿಯಲ್ಲಿ ಮೃತರ ಅಂತ್ಯಸಂಸ್ಕಾರ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Spread the love

Related Articles

Leave a Reply

Your email address will not be published. Required fields are marked *

Back to top button