Breaking Newsಜಿಲ್ಲಾ ಸುದ್ದಿರಾಜಕೀಯಹುಬ್ಬಳ್ಳಿ - ಧಾರವಾಡ

ಜನರ ಜೀವ ಉಳಿಸಿವುದಕ್ಕಾಗಿ ಸರ್ಕಾರ ಪಾಲಿಕೆ ಚುನಾವಣೆ ಮುಂದೂಡಬೇಕು: ಎಸ್‌.ಆರ್‌.ಹಿರೇಮಠ ಆಗ್ರಹ

ಧಾರವಾಡ : ರಾಜ್ಯದಲ್ಲಿ ಕೊರೊನಾ ಸೋಂಕಿನ ಸಂಖ್ಯೆ ಕ್ರಮೇಣವಾಗಿ ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಜನರ ಹಾಗೂ ಚಿಕ್ಕ ಮಕ್ಕಳ ಜೀವ ಉಳಿಸುವ ದೃಷ್ಟಿಯಿಂದ ಪಾಲಿಕೆ ಚುನಾವಣೆಗಳನ್ನು ರಾಜ್ಯ ಸರ್ಕಾರ ಮುಂದೂಡಬೇಕು ಎಂದು ಸಮಾಜ ಪರಿವರ್ತನಾ ಸಮುದಾಯದ ಸಂಸ್ಥಾಪಕ ಅಧ್ಯಕ್ಷ ಎಸ್‌.ಆರ್‌.ಹಿರೇಮಠ ಒತ್ತಾಯ ಮಾಡಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು. ಈ ಹಿಂದೆ ಇಂದಿರಾ ಗಾಂಧಿಯವರು 1976 ಡಿಸೆಂಬರ್‌ನಲ್ಲಿ, ಫೆಬ್ರವರಿಯಲ್ಲಿ ನಡೆಬೇಕಿದ್ದ ಚುನಾವಣೆಯನ್ನು ಒಂದು ವರ್ಷ ತಮ್ಮ ಕುರ್ಚಿ ಉಳಿಸಿಕೊಳ್ಳಲು ಮುಂದಕ್ಕೆ ಹಾಕಿದ್ದರು. ಆದರೆ ಈಗ ರಾಜ್ಯ ಸರ್ಕಾರ ಸಾರ್ವಜನಿಕರ ಹಾಗೂ ಮಕ್ಕಳ ಜೀವ ಉಳಿಸಿಕೊಳ್ಳಲು ಪಾಲಿಕೆ ಚುನಾವಣೆಗಳನ್ನು ಮುಂದಕ್ಕೆ ಹಾಕಬೇಕು ಎಂದ ಆಗ್ರಹಿಸಿದರು.

ಇದನ್ನೂ ಓದಿ : ಹೆಂಡತಿ ಕರೆಯಲು ಬಂದು ಮಾವನ ಮೇಲೆ ಹಲ್ಲೆ : ಆಸ್ಪತ್ರೆ ಸೇರಿದ ಹೆಣ್ಣು ಕೊಟ್ಟ ಮಾವ

ಕೊರೊನಾ ವೈರಸ್ ಎರಡನೇ ಅಲೆಯಲ್ಲಿ ಸಾಕಷ್ಟು ಸಾವು-ನೋವು ಸಂಭವಿಸಿವೆ. ಅಲ್ಲದೆ ಈ ಹಿಂದೆ ನಡೆದ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಮಾಸ್ಕ್ ಹಾಕದೆ ಸಾಮಾಜಿಕ ಅಂತರ ಕಾಪಾಡದೆ , ರ್ಯಾಲಿ ಮತ್ತೊಂದು ಮಗದೊಂದು ಮಾಡಿ ಚುನಾವಣೆ ನಡೆಸಿದರು. ಆದರೆ ಚುನಾವಣೆ ಬಳಿಕ ಅಲ್ಲಿ ಕೊರೊನಾ ಮಿತಿ ಮೀರಿ ಹೆಚ್ಚಾಗಿತ್ತು. ಅಲ್ಲದೆ ಎರಡನೇ ಅಲೆಗೂ ಕೂಡಾ ಅದೂ ಕಾರಣವಾಗಿತ್ತು. ಈಗ ಸ್ಥಳೀಯ ಸಂಸ್ಥೆಯ ಚುನಾವಣೆ ಘೋಷಣೆಯಾಗಿದೆ ಎಂದರು.

ಇದೀಗ ಮತ್ತೆ ಸರ್ಕಾರ ಜವಾಬ್ದಾರಿ ಮರೆತು ಚುನಾವಣೆ ನಡೆಸಬಾರದು. ಈ ಕೂಡಲೇ ಸರ್ಕಾರ ಪಾಲಿಕೆ ಚುನಾವಣೆ ಮುಂದೂಡಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

Spread the love

Related Articles

Leave a Reply

Your email address will not be published. Required fields are marked *

Back to top button